ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ ಕಂಪನಿ ಒಂದು. ಇದೇ ಕಂಪನಿ ಈಗ ಜಿಮ್ನಿ ಹೆಸರಿನ ವಾಹನವೊಂದನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದೊಂದು ವಿಭಿನ್ನ ಬಗೆಯ ಕಾರು ಆಗಿದೆ. ಇದಕ್ಕೆ 5 ಬಾಗಿಲುಗಳಿದ್ದು, ಇದರ ಬೆಲೆ 10 ಲಕ್ಷಕ್ಕೂ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ.
ಸುಜುಕಿ ಕಂಪನಿಯ ಈ ವಿಶೇಷ ಕಾರು, ಅಟೋಮ್ಯಾಟಿಕ್ ಅಲ್ಪಾವೆರಿಯಂಟ್ ಡಿಸೈನ್‌ನಲ್ಲಿ ರೂಪಗೊಂಡಿದ್ದು, ಇನ್ನೆರಡು ತಿಂಗಳಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 4-ಸ್ಪೀಡ್ ಆಟೋಮೋಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಈ ಕಾರು ಬರಲಿದೆ. ಇದರಲ್ಲಿ ಸೆಂಡರ್ಡ್ ರೂಪದಲ್ಲಿ4×4 ಡಾಇವೆಟನ್ ಅಳವಡಿಸಲಾಗಿದೆ. ಇನ್ನೂ ಸಾಮಾನ್ಯವಾಗಿ ಮಾರುತಿ ಕಂಪನಿಗಳ ಕಾರುಗಳಲ್ಲಿ ಬರುವಂತಹ 5-ಸ್ಪೀಡ್ ಮೆನುವಲ್ ಗಿಯರ್‌ಬಾಕ್ಸ್ ಕೂಡ ಸಿಗಲಿದೆ. ಇದೆಲ್ಲದರ ಜೊತೆಗೆ 103 ಬಿಎಚ್‌ಪಿಯ ಪವರ್ ಜನರೆಟ್ ಮಾಡುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಇದರಲ್ಲಿರುವುದು ವಿಶೇಷವಾಗಿದೆ.
ಈ ಜಿಮ್ಮಿಗೆ ಲೈಡರ್ ಪ್ರೈಮ್ ಚೆಸಿಸ್‌ನಿಂದ ಅದ್ಭುತ ರೂಪ ಕೊಡಲಾಗಿದೆ. 3-ಲಿಂಕ್ ಹಾರ್ಡ್ ಎಕ್ಸಲ್ ಸಸ್ಪೆಂಶನ್ ಮತ್ತು ಕಡಿಮೆ ರೆಂಜ್ ಟ್ರಾನ್ಸಫರ್ ಗಿಯರ್ ಜೊತೆಗೆ ALLGRIP PRO (4WD) ಹೊಸ ಟೆಕ್ನಾಲಾಜಿಯನ್ನ ಅಳವಡಿಸಲಾಗಿದೆ.
ಇದೆಲ್ಲದರ ಜೊತೆ ಜೊತೆಗೆ ಎಸ್‌ಯೂವಿ ನಲ್ಲಿ ಇಂಫೊಟೆನಮೆಂಟ್‌ಗಾಗಿ ಹೆಚ್‌ಡಿ ಡಿಸ್ಕ್ 22.86 ಸೆಮಿಯನ್ನ ಕೊಡಲಾಗಿದೆ. ಸ್ಮಾರ್ಟ್ ಫೆ ಪ್ರೊ+ ಇಂಫೊಟೆನೆಂಟ್ ಸಿಸ್ಟಮ್‌ನ್ನ ಕೂಡ ಅಳವಡಿಸಲಾಗಿದೆ. ಇನ್ನೂ ಸೋರ್ಟ್‌ಗಾಗಿಯೇ ಇಎಸ್‌ಪಿ, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ- ಕೆಮರಾ ಮತ್ತು ಇಬಿಡಿ ಹಾಗೂ ಎಬಿಎಸ್ ನಂತರ ಅತ್ಯಾಧುನಿಕ ಟೆಕ್ನಾಲಾಜಿಯನ್ನ ಈ ಕಾರಿನಲ್ಲಿ ನೋಡಬಹುದು. 5 ಬಾಗಿಲು ಇರುವ ಈ ಕಾರು ಇಷ್ಟು ಕಡಿಮೆ ಬೆಲೆಗೆ ಸಿಗುವುದೇ ವಿಶೇಷ. ಆದ್ದರಿಂದ ಇದನ್ನ ಕೊಂಡು ಕೊಳ್ಳಬೇಕೆಂದವರು ಇನ್ನೂ ಕೆಲವೇ ಕೆಲ ದಿನಗಳ ನಂತರ ಭಾರತದ ಶೋರೂಮ್ ಗಳಲ್ಲಿ ಈ ಕಾರುಗಳನ್ನ ನೋಡಬಹುದಾಗಿದೆ.