ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ನಗುಮೊಗದಲ್ಲಿ ಇರುತ್ತಾರೆ ಎಂಬ ವಿಚಾರ ಅಧ್ಯಯನವೊಂದರಲ್ಲಿ ಸಾಬೀತಾಗಿತ್ತು. ಮಹಿಳೆಯರು ಪ್ರತಿದಿನ ಸರಾಸರಿ 62 ಬಾರಿ ನಕ್ಕಿದ್ರೆ ಪುರುಷರು 8 ಬಾರಿ ನಗುತ್ತಾರಂತೆ. ಈ ನಗುವಿನ ನಡುವಿನ ಅಂತರವು ಯುವಾವಸ್ಥೆಯಲ್ಲಿ ಹೆಚ್ಚಿರುತ್ತದೆ. ಅದೇ ಪ್ರೌಢಾವಸ್ಥೆ ತಲುಪಿದಾಗ ಈ ವ್ಯತ್ಯಾಸ ಮಧ್ಯಮ ಪ್ರಮಾಣದಲ್ಲಿ ಇರುತ್ತದೆಯಂತೆ.
ಈ ವ್ಯತ್ಯಾಸಕ್ಕೆ ಸಂಶೋಧಕರು ಅನೇಕ ಕಾರಣಗಳನ್ನ ನೀಡಿದ್ದಾರೆ. ಮಹಿಳೆಯರು ಹೆಚ್ಚು ಅಭಿವ್ಯಕ್ತಿಶೀಲ, ಅನುಭೂತಿ ಹಾಗೂ ಭಾವನಾತ್ಮಕವಾಗಿರುತ್ತಾರೆ. ಅಲ್ಲದೇ ಪುರುಷರಿಗಿಂತ ಚೆಂದನೆಯ ನಗು ಮೊಗವನ್ನ ಹೊಂದಿರುತ್ತಾರೆ.
ವಯಸ್ಸು, ಸಂಸ್ಕೃತಿ ಇವೆಲ್ಲವೂ ನಗುವಿನ ಪ್ರಮಾಣವನ್ನ ಅಳೆಯುತ್ತವೆ. ಇದು ಮಾತ್ರವಲ್ಲದೇ ತಾನಿರುವ ಪರಿಸರದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಸಲುವಾಗಿಯೂ ಹೆಣ್ಣು ಮಕ್ಕಳು ಹೆಚ್ಚು ನಗುತ್ತಾರಂತೆ.
ಮಹಿಳೆಯರು ಪುರುಷರಿಗಿಂತ ಹೆಚ್ಚು ನಗಾಡಲು ಇವಿಷ್ಟೇ ಕಾರಣಗಳಲ್ಲ. ಹೆಣ್ಣು ಮಕ್ಕಳು ಜಾಸ್ತಿ ನಗುತ್ತಾರೆ ಎಂದ ಮಾತ್ರಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಖುಷಿಯಾಗಿ ಇರ್ತಾರೆ ಎಂಬರ್ಥವಲ್ಲ. ಬದಲಾಗಿ ಹೆಣ್ಣು ಮಕ್ಕಳು ತಮ್ಮ ಭಾವನೆಯನ್ನ ಹೊರಹಾಕಲು ಇಚ್ಛಿಸುತ್ತಾರೆ.
ಇನ್ನು ಪುರುಷರು ಹೆಚ್ಚು ನಗದೇ ಇರಲೂ ಅನೇಕ ಕಾರಣಗಳಿದೆ. ಪುರುಷರು ಮಹಿಳೆಯರಂತೆ ಭಾವನೆಯನ್ನ ಅಷ್ಟು ಸುಲಭವಾಗಿ ಹೊರ ಹಾಕೋದಿಲ್ಲ. ಭಾವನೆಯನ್ನ ಹೊರಹಾಕೋದು ಪುರುಷರಿಗೆ ಸುಲಭವಾದ ಕೆಲಸವೂ ಅಲ್ಲ. ಅದೇನೆ ಇರ್ಲಿ ಹೆಚ್ಚೆಚ್ಚು ನಗೋದು ಎಂದಿಗೂ ಒಳ್ಳೆಯ ಅಭ್ಯಾಸವೇ ಸರಿ.