ಚಪಾತಿ, ದೋಸೆ, ಪೂರಿಗೆಲ್ಲಾ ಈ ಮಿಕ್ಸ್ ವೆಜ್ ಕೂರ್ಮ ಹೇಳಿ ಮಾಡಿಸಿದ್ದು. ಎಲ್ಲಾ ತರಕಾರಿ ಬಳಸಿ ಮಾಡುವುದರಿಂದ ಆರೊಗ್ಯಕ್ಕೂ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿ-ಹೂಕೂಸು-1 ಮಧ್ಯಮ ಗಾತ್ರದ್ದು, 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮೆಟೊ, ಕ್ಯಾರೆಟ್-2, ಬೀನ್ಸ್-10, ಆಲೂಗಡ್ಡೆ-2, ಮೂಲಂಗಿ-1, ಖಾರದ ಪುಡಿ 1 ಟೇಬಲ್ ಚಮಚ, ಅರಿಸಿನ ಪುಡಿ-1 ಟೀ ಸ್ಪೂನ್, ಗರಂ ಮಸಾಲಾ-1 ಚಮಚ, ಕೊತ್ತಂಬರಿಸ ಸೊಪ್ಪು ಸ್ವಲ್ಪ, ತೆಂಗಿನತುರಿ-3 ಟೇಬಲ್ ಸ್ಪೂನ್, ಗೋಡಂಬಿ-5, ಗಸಗಸೆ-1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 2 ಟೇಬಲ್ ಸ್ಪೂನ್.
ಮಾಡುವ ವಿಧಾನ: ಮೊದಲಿಗೆ ತೆಂಗಿನತುರಿ, ಗೋಡಂಬಿ, ಗಸಗಸೆ ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಕುಕ್ಕರ್ ಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ತುಸು ಕೆಂಪಗಾದ ನಂತರ ಅದಕ್ಕೆ ಕತ್ತರಿಸಿಕೊಂಡ ಎಲ್ಲಾ ತರಕಾರಿಗಳನ್ನು ಹಾಕಿ. ಸ್ವಲ್ಪ ಉಪ್ಪು ಹಾಕಿ 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
ನಂತರ ಅದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ, ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಸಿ, ನಂತರ ರುಬ್ಬಿಕೊಂಡ ಮಸಾಲಾ ಹಾಕಿ, ಸ್ವಲ್ಪ ನೀರು ಹಾಕಿ 10 ನಿಮಿಷ ಕುದಿಸಿ. ನಂತರ ಕೊತ್ತಂಬರಿಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ.