ಮನೆಯಲ್ಲೇ ಕೆಲಸ ಮಾಡುವುದರಿಂದ ಒತ್ತಡ ಕಡಿಮೆಯಾಗಿದೆ ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಇದ್ದು ಮಕ್ಕಳ, ಮನೆಯ ಹಾಗೂ ಕಚೇರಿಯ ಕೆಲಸ ಮಾಡಿಕೊಳ್ಳುವಷ್ಟರಲ್ಲಿ ಸೋತು ಹೋಗುತ್ತಾರೆ.
ಇವುಗಳಿಂದ ಬೆನ್ನು ನೋವು ಕೂಡಾ ಹೆಚ್ಚಿದೆ ಎಂದು ಹಲವರು ಹೇಳುತ್ತಿರುತ್ತಾರೆ. ಅದನ್ನು ಸರಳವಾಗಿ ಹೀಗೆ ಪರಿಹರಿಸಬಹುದು. ನೀವು ಕೂರುವ ಕುರ್ಚಿ ಇಲ್ಲವೇ ಹಾಸಿಗೆ ಹಿಂಭಾಗಕ್ಕೆ ಬೆನ್ನಿಗೆ ಆಧಾರ ನೀಡುವಂತೆ ತಲೆದಿಂಬನ್ನು ಇಟ್ಟುಕೊಳ್ಳಿ. ಇದರಿಂದ ಬೆನ್ನು ನೋವು ಕೊಂಚ ಮಟ್ಟಿಗೆ ಕಡಿಮೆಯಾಗುತ್ತದೆ.
ಡೆಸ್ಕ್ ಟಾಪ್ ಹೈಟ್ ಅನ್ನು ನಿಮ್ಮ ಕಣ್ಣುಗಳಿಗೆ ಹೊಂದಿಕೆಯಾಗುವಂತೆ ಸೆಟ್ ಮಾಡಿ. ಕಂಪ್ಯೂಟರ್ ಸ್ಕ್ರೀನ್ ನಿಮ್ಮ ಕೈ ಮುಂದೆ ಚಾಚಿದಾಗ ಬೆರಳುಗಳಿಗೆ ಸಿಗುವಂತಿರಲಿ. ಗಂಟೆಗೊಮ್ಮೆ ಎದ್ದು ಆಚೀಚೆ ನಡೆದಾಡಲು ಮರೆಯದಿರಿ.
ಕುಳಿತುಕೊಳ್ಳುವ ಭಂಗಿ ಬದಲಾಯಿಸಿ. ಒಂದೇ ಭಂಗಿಯಲ್ಲಿ ಕೂರಬೇಡಿ. ಮೊಣಕಾಲನ್ನು ಬಗ್ಗಿಸಿ ನೆಲಕ್ಕೆ ಪಾದಗಳನ್ನು ಒತ್ತಿಡಿ. ಬಳಿಕ ಒಂದು ಕಾಲನ್ನು ಮೇಲಕ್ಕೆತ್ತಿ. ಕುರ್ಚಿಯಡಿಗೆ ಪಾದಗಳನ್ನು ಸರಿಸಿ. ಎದುರು ಭಾಗಕ್ಕೆ ತಂದು ಜೋಡಿಸಿ. ಹೀಗೆ ಭಂಗಿಯನ್ನು ಬದಲಾಯಿಸುತ್ತಿರಿ.
ಮಲಗಿ ಕೆಲಸ ಮಾಡುವುದು ಆರಾಮದಾಯಕ ಎನಿಸಬಹುದು. ಆದರೆ ಇದರಿಂದ ಅಪಾಯವಾಗುವ ಸಾಧ್ಯತೆಯೇ ಹೆಚ್ಚು.