alex Certify ತೊಡೆಯ ಒಳಭಾಗದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸುಲಭದ ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೊಡೆಯ ಒಳಭಾಗದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸುಲಭದ ಮನೆಮದ್ದು

ಸಾಮಾನ್ಯವಾಗಿ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಮಿನಿ ಸ್ಕರ್ಟ್‌, ಶಾರ್ಟ್ಸ್‌ ಧರಿಸಬೇಕು ಎಂಬ ಬಯಕೆ ಸಹಜ. ಆದ್ರೆ ಇಂತಹ ಮಿನಿ ಡ್ರೆಸ್‌ಗಳನ್ನು ಹಾಕಿಕೊಳ್ಳಬೇಕೆಂದರೆ ತೊಡೆ ಸುಂದರವಾಗಿರಬೇಕು. ಎಷ್ಟೋ ಮಹಿಳೆಯರು ದಪ್ಪನೆಯ ತೊಡೆಯಿಂದಾಗಿ ಮಿನಿ ಸ್ಕರ್ಟ್‌, ಶಾರ್ಟ್ಸ್‌ ಹಾಕಲು ಹಿಂದೇಟು ಹಾಕ್ತಾರೆ. ಇನ್ನು ಕೆಲವರಿಗೆ ತೊಡೆಯ ಒಳಭಾಗದಲ್ಲಿ ಕಪ್ಪು ಕಲೆಗಳು, ವರ್ತುಲಗಳಿರುತ್ತವೆ. ಹಾಗಾಗಿ ಶಾರ್ಟ್‌ ಡ್ರೆಸ್‌ಗಳನ್ನು ಧರಿಸಲು ಮುಜುಗರಪಟ್ಟುಕೊಳ್ತಾರೆ.

ಅದಕ್ಕಾಗಿ ಚಿಂತಿಸಬೇಕಿಲ್ಲ. ಮನೆಮದ್ದುಗಳ ಮೂಲಕ ತೊಡೆಯ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಈ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೋ ಜನರಿಗೆ ತಮ್ಮ ದೇಹವನ್ನು ಗಮನಿಸಿಕೊಳ್ಳಲು ಸಮಯವೇ ಇಲ್ಲ. ಬಿಡುವಿಲ್ಲದ ಜೀವನಶೈಲಿಯಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಕಷ್ಟವಾಗಿಬಿಡುತ್ತದೆ. ಹಾಗಾಗಿ ಕೆಲವೊಂದು ಸಿಂಪಲ್‌ ಸಲಹೆಗಳನ್ನು ಅನುಸರಿಸಿದ್ರೆ ಸುಂದರ ತ್ವಚೆ ನಿಮ್ಮದಾಗುತ್ತದೆ.

ನಿಮ್ಮ ತೊಡೆಯ ಒಳಭಾಗದಲ್ಲಿರುವ ಕಲೆಯನ್ನು ಸ್ವಚ್ಛಗೊಳಿಸಲು ಕೆಲವು ಸರಳ ಮತ್ತು ಸುಲಭವಾದ ಮಾರ್ಗಗಳಿವೆ. ಈ ಸ್ಥಳವು ಕಪ್ಪಾಗಲು ಶಿಲೀಂಧ್ರಗಳ ಸೋಂಕು, ಸೂರ್ಯನ ಸುಡುವಿಕೆ ಅಥವಾ ಅಸಮತೋಲನದ ಹಾರ್ಮೋನುಗಳಂತಹ ಹಲವು ಕಾರಣಗಳಿರಬಹುದು. ಆದ್ದರಿಂದ ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಲೋವೆರಾ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದು ಚರ್ಮಕ್ಕೆ ತೇವಾಂಶವನ್ನು ಒದಗಿಸುವ ಮೂಲಕ ಕಲೆಯನ್ನು ಮಾಯ ಮಾಡುತ್ತದೆ.

ಅಲೋವೆರಾಕ್ಕೆ ರೋಸ್ ವಾಟರ್ ಅನ್ನು ಬೆರೆಸಿ ತೊಡೆಯ ಮೇಲೆ ಹಚ್ಚಿ. ನಿಯಮಿತವಾಗಿ ಈ ರೀತಿ ಮಾಡಿದರೆ ಪರಿಣಾಮ ಗೋಚರಿಸುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆಯನ್ನು ತೆಂಗಿನ ಎಣ್ಣೆಯಲ್ಲಿ ರುಬ್ಬಿ ತೊಡೆಯ ಮೇಲೆ ಉಜ್ಜಬಹುದು. ಇದರಿಂದಾಗಿ ನಿಮ್ಮ ಚರ್ಮದ ಮೇಲಿನ  ಕಪ್ಪು ಗುರುತುಗಳು ಕಡಿಮೆಯಾಗುತ್ತವೆ.

ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಲವಂಗದ ಸಹಾಯದಿಂದ ತಯಾರಿಸಿದ ಕ್ರೀಮ್ ಅನ್ನು ಕೂಡ ಬಳಸಬಹುದು. 2 ಚಮಚ ತೆಂಗಿನ ಎಣ್ಣೆ ಮತ್ತು 8 ಲವಂಗ ತುಂಡುಗಳನ್ನು ಮಿಶ್ರಣ ಮಾಡಿ. ಇದನ್ನು ಒಂದು ಪಾತ್ರೆಯಲ್ಲಿ ಹಾಕಿ ಎಣ್ಣೆಯ ಬಣ್ಣ ಕಪ್ಪಾಗುವವರೆಗೆ ಕುದಿಸಿ. ನಂತರ ಇದಕ್ಕೆ ಅಲೋವೆರಾ ಜೆಲ್‌ ಬೆರೆಸಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. ಆಲೂಗಡ್ಡೆ ಕೂಡ ಈ ಕಲೆಯನ್ನು ಹೋಗಲಾಡಿಸುತ್ತದೆ. ಆಲೂಗಡ್ಡೆಯ ಸ್ಲೈಸ್‌ ಮಾಡಿಕೊಂಡು ಅದನ್ನು ಕಪ್ಪು ಕಲೆಗಳ ಮೇಲೆ ಉಜ್ಜಿಕೊಳ್ಳಿ. ಅಥವಾ ಅದರ ಪೇಸ್ಟ್‌ ಮಾಡಿ ಅದನ್ನು ಸಹ ತೊಡೆಯ ಮೇಲೆ ಹಚ್ಚಬಹುದು. ಇದು ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿರುತ್ತದೆ. ಚರ್ಮವನ್ನು ಪುನರ್‌ಯೌವ್ವನಗೊಳಿಸಲು ಸಹಾಯ ಮಾಡುತ್ತದೆ. ಈ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಂಡರೆ ನಿಮ್ಮ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...