ಪ್ರತಿನಿತ್ಯ ನಮ್ಮನ್ನು ಕಾಡುವ ಬಹುತೇಕ ಕಾಯಿಲೆಗಳಿಗೆ ಕಾರಣ ನಾವು ಸೇವಿಸುವ ಆಹಾರ. ಅದರಲ್ಲಿರೋ ರಾಸಾಯನಿಕಗಳು. ಮೂಲವ್ಯಾಧಿ ಕೂಡ ಇವುಗಳಲ್ಲೊಂದು. ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು, ಸೂಕ್ತವಾದ ಆಹಾರ ಸೇವಿಸಿದ್ರೆ ಪೈಲ್ಸ್ ನಿಂದ ಮುಕ್ತಿ ಪಡೆಯಬಹುದು. ಕೆಲವರು ಪೈಲ್ಸ್ ಆಪರೇಶನ್ ಕೂಡ ಮಾಡಿಸಿಕೊಳ್ತಾರೆ.
ಮೂಲವ್ಯಾಧಿಗೆ ಮನೆಯಲ್ಲೇ ಇರುವ ಸರಳ ಮದ್ದುಗಳು ಯಾವುದು ಅನ್ನೋದನ್ನು ನೋಡೋಣ. ಬೇವಿನ ಎಲೆ, ಹಣ್ಣು, ಎಳ್ಳು ಮತ್ತು ಅಲೋವೆರಾ ಈ ಗಂಭೀರ ಕಾಯಿಲೆಗೆ ಪರಿಹಾರ ಕೊಡಬಲ್ಲದು. ಮೂಲವ್ಯಾಧಿ ಗುದದ್ವಾರದಲ್ಲಿ ಉಂಟಾಗುವ ಸಮಸ್ಯೆ. ಒಳ ಮತ್ತು ಹೊರಗಿನ ರಕ್ತನಾಳಗಳು ಊದಿಕೊಳ್ಳುವುದರಿಂದ ಮಲ ವಿಸರ್ಜನೆ ಕಷ್ಟವಾಗುತ್ತದೆ. ಹೆಚ್ಚು ಒತ್ತಡ ಹಾಕಿದ್ರೆ ತೀವ್ರ ನೋವು ಮತ್ತು ರಕ್ತಸ್ರಾವ ಉಂಟಾಗುತ್ತದೆ.
ಮಲಬದ್ಧತೆಯ ಸಮಸ್ಯೆ ಇರುವವರಲ್ಲಿ ಮೂಲವ್ಯಾಧಿ ಕಾಣಿಸಿಕೊಳ್ಳುತ್ತದೆ. ಬಾಹ್ಯ ಮೂಲವ್ಯಾಧಿಯಲ್ಲಿ ಗುದದ ಹೊರಗೆ ಚೆಂಡು ಕಾಣಿಸಿಕೊಂಡು ತೀವ್ರ ಯಾತನೆ ಅನುಭವಿಸಬೇಕಾಗುತ್ತದೆ. ಪೈಲ್ಸ್ ನಿಂದ ಬಳಲುತ್ತಿರುವವರು ಫೈಬರ್ ಮತ್ತು ನೀರಿನಂಶ ಹೆಚ್ಚಾಗಿರುವ ಆಹಾರ ವಸ್ತುಗಳನ್ನು ತಿನ್ನಬೇಕು. ಎಳ್ಳನ್ನು ಹೆಚ್ಚಾಗಿ ಸೇವಿಸಿ, ಜೊತೆಗೆ ಎಳ್ಳೆಣ್ಣೆಯನ್ನೂ ಬಳಸಿ. ಇದಲ್ಲದೇ ಬೇವಿನ ಸೊಪ್ಪು, ಬೆರಿಹಣ್ಣುಗಳು ಮತ್ತು ಅಲೋವೆರಾದಿಂದ ಕೂಡ ಮೂಲವ್ಯಾಧಿಯನ್ನು ಕಡಿಮೆ ಮಾಡಬಹುದು.