ಬದಲಾಗುತ್ತಿರುವ ಹವಾಮಾನ ಮತ್ತು ಮಾಲಿನ್ಯದಿಂದ ಉಂಟಾಗುವ ಬಹುದೊಡ್ಡ ಸಮಸ್ಯೆಗಳಲ್ಲೊಂದು ಗಂಟಲು ನೋವು. ಬದಲಾದ ಋತುವಿನಲ್ಲಂತೂ ಬಹುತೇಕ ಎಲ್ಲರನ್ನೂ ಗಂಟಲು ನೋವು ಕಾಡುತ್ತದೆ. ಇದರ ಜೊತೆಜೊತೆಗೆ ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳೂ ಶುರುವಾಗುತ್ತವೆ.
ಕೆಲವೊಮ್ಮೆ ಗಂಟಲು ನೋವಿನ ಜೊತೆಗೆ ಊತ ಕೂಡ ಕಾಣಿಸಿಕೊಳ್ಳುತ್ತದೆ. ಶೀತ ಅಥವಾ ಧೂಳಿನ ಕಾರಣದಿಂದಾಗಿ ಗಂಟಲಿನ ಕೊಳವೆಗಳ ಮೇಲೆ ಪರಿಣಾಮ ಉಂಟಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕೆಲವು ಮನೆಮದ್ದು ಮತ್ತು ಆಯುರ್ವೇದದ ಮೂಲಕ ಗಂಟಲು ನೋವಿಗೆ ತಕ್ಷಣದ ಪರಿಹಾರ ಪಡೆಯಬಹುದು.
ಶುಂಠಿ ಮತ್ತು ಜೇನುತುಪ್ಪ: ಗಂಟಲು ನೋವಿಗೆ ಶುಂಠಿ ಮತ್ತು ಜೇನುತುಪ್ಪ ಪರಿಣಾಮಕಾರಿ ಔಷಧ. ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಗಂಟಲಿನ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ರಸ ತೆಗೆಯಿರಿ. ಅದನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವಿಸಿ. ಇದನ್ನು ತಿನ್ನುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಈ ಮನೆಮದ್ದನ್ನು ಸೇವಿಸಬೇಕು.
ಆಹಾರದಲ್ಲಿ ಬದಲಾವಣೆ : ಹವಾಮಾನ ಬದಲಾದಾಗ ಮೊದಲು ನಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಬೇಸಿಗೆಯಲ್ಲಿ ತಣ್ಣನೆಯ ಮಜ್ಜಿಗೆಯಂತಹ ಪದಾರ್ಥಗಳನ್ನು ನಾವು ಸೇವಿಸುತ್ತೇವೆ. ಆದರೆ ಚಳಿಗಾಲದಲ್ಲಿ ಬಿಸಿ ಬಿಸಿಯಾದ ಆಹಾರವನ್ನೇ ಹೆಚ್ಚಾಗಿ ಸೇವನೆ ಮಾಡಬೇಕು.
ಬೆಚ್ಚಗಿನ ನೀರಿನಿಂದ ಗಾರ್ಗಲ್ : ಗಂಟಲು ನೋವಿದ್ದಾಗ ಬೆಚ್ಚಗಿನ ನೀರಿನಿಂದ ಗಾರ್ಗಲ್ ಮಾಡಬೇಕು. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಗಾರ್ಗಲ್ ಮಾಡುವುದರಿಂದ ಬೇಗನೆ ಪರಿಹಾರ ಸಿಗುತ್ತದೆ.
ಶುಂಠಿ ಮತ್ತು ನಿಂಬೆ : ಬಿಸಿ ನೀರಿಗೆ ಉಪ್ಪು ಮತ್ತು ಶುಂಠಿ ರಸವನ್ನು ಬೆರೆಸಿ ಗಾರ್ಗಲ್ ಮಾಡಬಹುದು. ದಿನಕ್ಕೆ ನಾಲ್ಕಾರು ಬಾರಿ ಈ ರೀತಿ ಮಾಡಿದರೆ ಗಂಟಲು ನೋವು ಬೇಗನೆ ಗುಣವಾಗುತ್ತದೆ.