ನಾನ್ ವೆಜ್ ಪ್ರಿಯರಿಗೆ ಚಿಕನ್ ಇದ್ದರೆ ಸಖತ್ ಇಷ್ಟವಾಗುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಗ್ರಿಲ್ ಚಿಕನ್ ರೆಸಿಪಿ ಇದೆ. ಒಮ್ಮೆ ಟ್ರೈ ಮಾಡಿ ಮನೆಯಲ್ಲಿ.
ಬೇಕಾಗುವ ಸಾಮಾಗ್ರಿಗಳು:
ಚಿಕನ್ ಲೆಗ್ಸ್ ಪೀಸ್ – 2, ಶುಂಠಿ – 1 ಇಂಚು, ಬೆಳ್ಳುಳ್ಳಿ – 6 ಎಸಳು, ಖಾರದ ಪುಡಿ – 1 ಟೀ ಸ್ಪೂನ್, ಗರಂ ಮಸಾಲ – 1 ಟೀ ಸ್ಪೂನ್, ಸೋಯಾ ಸಾಸ್ – 1 ಟೇಬಲ್ ಸ್ಪೂನ್, ಕಾಳುಮೆಣಸು – 2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಲಿಂಬೆಹಣ್ಣಿನ ಜ್ಯೂಸ್ – 2ಟೇಬಲ್ ಸ್ಪೂನ್, ಎಣ್ಣೆ – 3 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಚಿಕನ್ ಬಿಟ್ಟು ಉಳಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದುಕೊಳ್ಳಿ. ನಂತರ ಇದಕ್ಕೆ ಚಿಕನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 3 ಗಂಟೆಗಳ ಕಾಲ ಹಾಗೆಯೇ ಬಿಡಿ.
ಬೇಕಿಂಗ್ ಟ್ರೇ ಮೇಲೆ ಗ್ರಿಲ್ ಪ್ಯಾನ್ ಇಟ್ಟು ಅದರ ಮೇಲೆ ಚಿಕನ್ ಪೀಸ್ ಇಟ್ಟು ಪ್ರಿ ಹೀಟ್ ಮಾಡಿಕೊಂಡ ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದನ್ನು ತಿರುವಿ ಹಾಕಿ ಮತ್ತೆ 20 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಕರವಾದ ಗ್ರಿಲ್ ಚಿಕನ್ ರೆಡಿ.