ವರ್ಕ್ ಫ್ರಮ್ ಹೋಮ್ ಅವಧಿ ಶುರುವಾಗಿಎರಡು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಕಳೆದುಹೋಗಿದೆ. ಕೆಲವರು ಕಚೇರಿಗೆ ಹೋಗುತ್ತಿದ್ದರೆ, ಇನ್ನು ಕೆಲವರು ಇನ್ನೂ ಮನೆಯಲ್ಲೇ ಕೂತು ಕೆಲಸ ಮಾಡೋದ್ರ ಜೊತೆಗೆ ಜಂಕ್ ಫುಡ್ ಹಾಗೂ ಸಕ್ಕರೆ ಅಂಶ ಹೆಚ್ಚಾದ ಆಹಾರವನ್ನ ಸೇವನೆ ಮಾಡಿದ ಪರಿಣಾಮ ಹೆಚ್ಚಿನ ಮಂದಿ ತೂಕ ಹೆಚ್ಚಾಗಿದೆ ಎಂದು ಹೇಳಿಕೊಳ್ತಿದ್ದಾರೆ.
ಈ ಸಮಸ್ಯೆಯಿಂದ ನೀವು ಕೂಡ ಬಳಲುತ್ತಿದ್ದರೆ ನಿಮಗಾಗಿ ಕೆಲವೊಂದು ವಿಶೇಷ ಸಲಹೆಗಳು ಇಲ್ಲಿದೆ ನೋಡಿ:
ತೂಕ ಇಳಿಸುವಿಕೆ ಪ್ರಕ್ರಿಯೆಯಲ್ಲಿ ಆಹಾರ ಸೇವನೆ ಪ್ರಮುಖ ಪಾತ್ರ ವಹಿಸುತ್ತೆ. ಹೀಗಾಗಿ ನೀವು ತಿನ್ನುವ ಆಹಾರದ ವಿಚಾರದಲ್ಲಿ ವಿಶೇಷ ಜಾಗ್ರತೆ ವಹಿಸಿ. ತೂಕ ಹೆಚ್ಚಳ ಹಾಗೂ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರು ಕಾರ್ಬೋಹೈಡ್ರೇಟ್ ಇರುವ ಆಹಾರವನ್ನ ಸೇವಿಸಲೇಬೇಡಿ.
ವರ್ಕ್ ಫ್ರಮ್ ಹೋಂನಿಂದಾಗಿ ಅನೇಕರಿಗೆ ದೈನಂದಿನ ಚಟುವಟಿಕೆ ಮನೆಯೊಳಗೆ ಸೀಮಿತವಾಗಿದೆ. ಆದರೆ ಕೆಲಸದ ಜೊತೆ ದೇಹ ದಂಡಿಸೋದು ಕೂಡ ತುಂಬಾನೇ ಮುಖ್ಯ. ಹೀಗಾಗಿ ಫ್ರೀ ಟೈಂನಲ್ಲಿ ಉಠಕ್ ಬೈಟಕ್, ಪುಶಪ್ಸ್, ಪುಲಪ್ಸ್, ಯೋಗಾಸನಗಳನ್ನ ಮಾಡಿ.
ಆಹಾರ ಕ್ರಮದಲ್ಲಿ ಸರಿಯಾದ ಪ್ಲಾನ್ ಮಾಡಿ. ಕರಿದ ಹಾಗೂ ಜಂಕ್ ಪದಾರ್ಥಗಳನ್ನ ಮುಟ್ಟಲೇಬೇಡಿ. ಬೇಸರವಾಗ್ತಿದೆ ಎಂದು ಚಿಪ್ಸ್ ತಿನ್ನುವ ಅಭ್ಯಾಸವಿದ್ದರೆ ಈಗಿನಿಂದಲೇ ಬಿಟ್ಟುಬಿಡಿ. ಈ ಜಾಗದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನ ಸೇವಿಸಿ.
ಕಾಫಿ, ಚಹದ ಜಾಗದಲ್ಲಿ ಗ್ರೀನ್ ಟೀ, ಬ್ಲಾಕ್ ಟೀಗಳನ್ನ ಸೇವಿಸಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸಲಿದೆ. ಇದರ ಜೊತೆಯಲ್ಲಿ ನಿದ್ರಾ ಕ್ರಮವನ್ನ ಸರಿಯಾಗಿಡಿ.