ನೇಲ್ ಪಾಲಿಶ್ ಉಗುರಿನ ಸೌಂದರ್ಯ ಹೆಚ್ಚಿಸುತ್ತದೆ. ಕೈಗೆ ಹೊಂದುವ ನೇಲ್ ಪಾಲಿಶನ್ನು ಸರಿಯಾದ ವಿಧಾನದಲ್ಲಿ ಹಚ್ಚಿಕೊಳ್ಳಬೇಕು. ನೇಲ್ ಪಾಲಿಶ್ ಹಚ್ಚಿ ನಾಲ್ಕೈದು ದಿನಗಳಾದ ಮೇಲೆ ಅಲ್ಲಲ್ಲಿ ಮಾತ್ರ ಬಣ್ಣ ಉಳಿದುಕೊಂಡು ಉಗುರಿನ ಸೌಂದರ್ಯ ಹಾಳು ಮಾಡುತ್ತದೆ.
ನೇಲ್ ಪಾಲಿಶ್ ತೆಗೆಯಲು ಅನೇಕ ಕಂಪನಿಗಳು ಮಾರುಕಟ್ಟೆಗೆ ನೇಲ್ ಪಾಲಿಶ್ ರಿಮೂವರ್ ಬಿಟ್ಟಿವೆ. ಆದ್ರೆ ಮನೆಯಲ್ಲಿರುವ ವಸ್ತು ಬಳಸಿ ಸುಲಭವಾಗಿ ನೇಲ್ ಪಾಲಿಶ್ ತೆಗೆಯಬಹುದು.
ಆಲ್ಕೋಹಾಲ್ : ಮನೆಯಲ್ಲಿ ಆಲ್ಕೋಹಾಲ್ ಇದ್ದರೆ ಅದನ್ನು ಉಗುರಿನ ಮೇಲೆ ಹಾಕಿ ಒಣಗಿದ ಬಟ್ಟೆಯಲ್ಲಿ ಉಗುರನ್ನು ನಿಧಾನವಾಗಿ ರಬ್ ಮಾಡಿ. ಉಗುರಿನ ಬಣ್ಣ ಸಂಪೂರ್ಣವಾಗಿ ಹೋಗಿ ಉಗುರು ಸ್ವಚ್ಛವಾಗುತ್ತದೆ.
ವಿನೆಗರ್ : ವಿನೆಗರ್ ಕೂಡ ನೇಲ್ ಪಾಲಿಶ್ ತೆಗೆಯಲು ಸಹಕಾರಿ. ಹತ್ತಿ ಮೇಲೆ ವಿನೆಗರ್ ಹಾಕಿ ಅದನ್ನು ಉಗುರಿನ ಬಣ್ಣದ ಮೇಲೆ ರಬ್ ಮಾಡಿ.
ಬಿಸಿ ನೀರು : ವಿನೆಗರ್, ಆಲ್ಕೋಹಾಲ್ ಮನೆಯಲ್ಲಿ ಇಲ್ಲವಾದ್ರೆ ಬಿಸಿ ಬಿಸಿ ನೀರಿನಲ್ಲಿ 10 ನಿಮಿಷ ಕೈಗಳನ್ನು ಅದ್ದಿಡಿ. ನಂತ್ರ ಹತ್ತಿಯಲ್ಲಿ ನಿಧಾನವಾಗಿ ಉಗುರಿನ ಬಣ್ಣವನ್ನು ರಬ್ ಮಾಡಿ.
ಪೇಸ್ಟ್ : ಟೂತ್ಪೇಸ್ಟ್ ನಿಂದ ಅನೇಕ ಉಪಯೋಗವಿದೆ. ನೇಲ್ ಪಾಲಿಶ್ ಕ್ಲೀನ್ ಆಗಿ ಹೋಗಿಲ್ಲವೆಂದಾದ್ರೆ ಉಗುರಿಗೆ ಟೂತ್ಪೇಸ್ಟ್ ಹಚ್ಚಿ. ನಿಧಾನವಾಗಿ ಉಗುರನ್ನು ಮಸಾಜ್ ಮಾಡಿ.
ನೇಲ್ ಪಾಲಿಶ್ : ಮುಳ್ಳನ್ನು ಮುಳ್ಳಿನಿಂದಲೇ ಕೀಳಬೇಕೆಂಬ ಮಾತಿದೆ. ಹಾಗೆ ನೇಲ್ ಪಾಲಿಶ್ ಉಗುರಿಗೆ ಅಂಟಿರುವ ನೇಲ್ ಪಾಲಿಶ್ ತೆಗೆಯಲು ಸಹಕಾರಿ. ಉಗುರಿಗೆ ನೇಲ್ ಪಾಲಿಶ್ ಹಚ್ಚಿ ತಕ್ಷಣ ಬಟ್ಟೆಯಲ್ಲಿ ಉಗುರನ್ನು ತಿಕ್ಕಿ. ಹೊಸ ನೇಲ್ ಪಾಲಿಶ್ ಜೊತೆ ಹಳೆ ಬಣ್ಣ ಕೂಡ ಬಟ್ಟೆಗೆ ಹಿಡಿದು ಉಗುರು ಸ್ವಚ್ಛವಾಗುತ್ತದೆ.