ಉಗುರಿನ ಸೌಂದರ್ಯದ ಬಗ್ಗೆ ಕಾಳಜಿ ಮಾಡದವರು ಯಾರು ಹೇಳಿ. ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕೆಂಬ ಬಯಕೆ ಹೆಚ್ಚೇ ಇರುತ್ತದೆ.
ಆದರೆ ಅಡುಗೆ ಮನೆಯ ಕೆಲಸಗಳ ಮಧ್ಯೆ ಅದು ಸಾಧ್ಯವಾಗದೆಯೂ ಇರುವುದುಂಟು. ಈ ಕೆಲಸದ ಮಧ್ಯೆಯೂ ಉಗುರುಗಳನ್ನು ಹೇಗೆ ಆಕರ್ಷಕವಾಗಿ ಇಟ್ಟುಕೊಳ್ಳಬಹುದು ನೋಡೋಣ.
ಅಡುಗೆ ಮನೆಯಲ್ಲಿ ಲಿಂಬೆ ಹಣ್ಣು ಹಿಂಡಿದ ಬಳಿಕ ಉಳಿಯುವ ಸಿಪ್ಪೆಯನ್ನು ತಿಪ್ಪೆಗೆ ಎಸೆಯದಿರಿ. ಅದರಿಂದ ಕನಿಷ್ಠ ಐದು ನಿಮಿಷಗಳ ಕಾಲ ನಿಮ್ಮ ಉಗುರುಗಳಿಗೆ ಮಸಾಜ್ ಮಾಡಿ. ಇದರಿಂದ ಉಗುರಿನ ಸಂದಿಗಳಲ್ಲಿ ಉಳಿದ ಕೊಳೆ ದೂರವಾಗುತ್ತದೆ. ಉಗುರು ಸ್ವಚ್ಛವಾಗುತ್ತದೆ.
ಉಗುರಿಗೆ ಬಣ್ಣ ಹಚ್ಚುವಾಗ ಬೇಸ್ ಕೋಟ್ ಸರಿಯಾಗಿ ಹಚ್ಚಿ, ಬಳಿಕ ನಿಮ್ಮಿಷ್ಟದ ಬಣ್ಣದ ನೇಲ್ ಪಾಲಿಶ್ ಹಚ್ಚಿ. ಇದರಿಂದ ದೀರ್ಘಕಾಲದ ವರೆಗೆ ನಿಮ್ಮ ಉಗುರು ಆಕರ್ಷಣೆಯನ್ನು ಉಳಿಸಿಕೊಳ್ಳುತ್ತದೆ. ಅಲ್ಲದೆ ಉಗುರಿನ ಕಲೆಗಳು ಮರೆಯಾಗುತ್ತವೆ.
ನೈಲ್ ಪಾಲಿಶ್ ಬಣ್ಣದ ಆಯ್ಕೆ ಮಾಡುವಾಗ ಎಚ್ಚರವಿರಲಿ. ನಿಮ್ಮ ಉಗುರಿಗೆ ಹೊಂದಿಕೊಳ್ಳುವ ಬಣ್ಣದ ಆಯ್ಕೆ ಮಾಡಿ. ಡಬಲ್ ಕೋಟ್ ಹಾಕುವುದರಿಂದ ಉಗುರು ಹಾಗೂ ಬೆರಳು ಅಂದವಾಗಿ ಕಾಣುತ್ತದೆ.