ತಲೆಹೊಟ್ಟು ಇಲ್ಲದ ಕೂದಲು ನಿಮ್ಮದಾಗಬೇಕೇ? ಹಾಗಾದರೆ ಇಲ್ಲಿದೆ ಮನೆ ಮದ್ದು. ಆಂಟಿ ಡ್ಯಾಂಡ್ರಫ್ ಪ್ಯಾಕ್ ತಯಾರಿಸಲು ಬೇಕಿರುವುದು.
ಮೊಸರು 150 ಎಮ್ ಎಲ್, ಒಂದು ಚಮಚ ಲೋಳೆ ರಸ, ಅರ್ಧ ಹೋಳು ನಿಂಬೆ ರಸ, ಒಂದು ಚಿಟಿಕೆ ಅರಿಶಿಣ ಪುಡಿ, 2 ಚಿಕ್ಕ ಕರ್ಪೂರ ಪುಡಿ. ಇವನ್ನೆಲ್ಲಾ ಮೊಸರಿಗೆ ಹಾಕಿ ಮಿಕ್ಸ್ ಮಾಡಿ ಅದರ ಜೊತೆಗೆ ಎರಡು ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ಎರಡು ಟೀ ಸ್ಪೂನ್ ಹರಳೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಗೆಯೇ ಉದ್ದ ಕೂದಲು ಇದ್ದರೆ ಈ ಪ್ರಮಾಣವನ್ನು ದುಪ್ಪಟ್ಟಿರಲಿ. ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.
ಈ ಪ್ಯಾಕ್ ಉಪಯೋಗಿಸುವಾಗ ಕೂದಲಿಗೆ ಎಣ್ಣೆ ಹಚ್ಚಿರಬಾರದು ಒಣಗಿದ ಕೂದಲಿಗೆ ಮಾತ್ರ ಈ ಪ್ಯಾಕ್ ಹಚ್ಚಿ. ಹೀಗೆ ಮಾಡಿದರೆ ಮಾತ್ರ ನಿಮಗೆ 100% ಫಲಿತಾಂಶ ಸಿಗುತ್ತದೆ.