ಪ್ರತಿದಿನವೂ ಎದ್ದ ತಕ್ಷಣ ಇವತ್ತಿನ ದಿನ ಚೆನ್ನಾಗಿರಲಿ, ಕೆಲಸದಲ್ಲಿ ಯಶಸ್ಸು ಸಿಗಲಿ ಹೀಗೆ ಹಲವು ಭರವಸೆ, ನಿರೀಕ್ಷೆ ಜೊತೆ ಏಳ್ತೆವೆ. ದೇವರ ಸ್ಮರಣೆ ಮಾಡಿ ಏಳುವ ಅಭ್ಯಾಸ ಅನೇಕರಿಗಿರುತ್ತದೆ. ಈಗೆಲ್ಲ ಡಿಜಿಟಲ್ ಯುಗವಾದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವವರು ಹೆಚ್ಚು. ಬರೀ ಮೊಬೈಲ್ ನೋಡಿ ಸುಮ್ಮನಿರುವುದಿಲ್ಲ ಗುಡ್ ಮಾರ್ನಿಂಗ್ ಮೆಸ್ಸೇಜ್ ಕಳುಹಿಸುತ್ತಾರೆ.
ಆದರೆ ಇಂತಹ ಶುಭಾಶಯಗಳು ಕೆಲವರಿಗೆ ಬೇಸರ ತರಿಸಬಹುದು. ಅಯ್ಯೋ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಪೂರ್ತಿ ಗುಡ್ ಮಾರ್ನಿಂಗ್ ಮೆಸೇಜ್ ಬರತ್ತೆ ಅಂತ ಬೇಸರ ವ್ಯಕ್ತಪಡಿಸಬಹುದು. ಹಾಗಾಗಿ ನೀವು ಗುಡ್ ಮಾರ್ನಿಂಗ್ ಸಂದೇಶವನ್ನು ಸ್ವಲ್ಪ ಭಿನ್ನವಾಗಿ ಹೇಳಿದರೆ ಸ್ನೇಹಿತರಿಗೆ, ಬಂಧುಗಳಿಗೆ, ಪ್ರೀತಿಸುವವರಿಗೆ ಖುಷಿ ಸಿಗುತ್ತದೆ.
ಗೆಳೆಯರಿಗೆ ಹೀಗೆ ವಿಶ್ ಮಾಡಿ..
ಹೊಸ ದಿನ ಹೊಸ ಬದುಕು
ಗೆಳೆಯರನ್ನು ನೆನೆಯಲು ಹೊಸ ಹುರುಪು
ಪ್ರೀತಿಯಿಂದ ಸ್ನೇಹ ಸಂದೇಶ ಹಂಚಲು
ದಿನವಿಡೀ ಹರ್ಷದ ಹೊನಲು….ಗುಡ್ ಮಾರ್ನಿಂಗ್ ಫ್ರೆಂಡ್
ಹೊಸ ಬೆಳಕು ಹೊಸ ಆರಂಭ
ನಮಿಸಿ ಬೇಡಿದರೆ ಈ ದಿನವೆಲ್ಲ ಶುಭ..ಶುಭೋದಯ
ಪರಿವಾರದವರಿಗೆ ಹೀಗೆ ವಿಶ್ ಮಾಡಿ..
ಭಗವಂತನಲ್ಲಿ ಇರಲಿ ನಂಬಿಕೆ
ಅವನ ಕರುಣೆ ಅದುವೆ ನಿಮ್ಮ ಒಳಿತಿಗೆ..ಗುಡ್ ಮಾರ್ನಿಂಗ್
ಒಳ್ಳೆಯ ಮಿತ್ರ, ಒಳ್ಳೆಯ ಪರಿವಾರ, ಒಳ್ಳೆಯ ಸಂಬಂಧಿ ಮತ್ತು ಒಳ್ಳೆಯ ವಿಚಾರ ಯಾರ ಬಳಿ ಇರುತ್ತದೆಯೋ ಅವರನ್ನು ಜಗತ್ತಿನ ಯಾವ ಶಕ್ತಿಯೂ ಸೋಲಿಸಲಾಗುವುದಿಲ್ಲ.. ಶುಭ ಮುಂಜಾನೆ
ಪ್ರೀತಿಸುವವರಿಗೆ..
ಹೂವೆಲೆಗಳು ಒದ್ದೆಯಾಗಿಹುದು ಇಬ್ಬನಿಯಿಂದ
ತಾಜಾತನ ತುಂಬಿದೆ ತಣ್ಣನೆಯ ಗಾಳಿಯಿಂದ
ಮುಂಜಾವು ನಿಮ್ಮನ್ನು ಎಬ್ಬಿಸುತ್ತಿದೆ ಪ್ರೀತಿ ತುಂಬಿದ ನಗುವಿನಿಂದ… ಗುಡ್ ಮಾರ್ನಿಂಗ್
ನಿನ್ನ ಸಾನಿಧ್ಯದಿಂದಲೇ ನಗುತಿದೆ ಎನ್ನ ಜೀವನ
ಪ್ರೀತಿಯ ಹಾಡನ್ನು ಹೇಳುವುದೇ ಕೋಗಿಲೆಯ ಜೀವನ
ಹೊಸ ದಿನ ತಂದ ಸಂದೇಶವದು ನೂತನ
ಮುಂಜಾವಿನ ಹಾರೈಕೆಯಿದು ನಿಮಗೆ ಪ್ರೀತಿಯ ಸಿಂಚನ.. ಗುಡ್ ಮಾರ್ನಿಂಗ್
ಹೀಗೆ ಭಿನ್ನವಾಗಿ ನೀವು ಶುಭ ಮುಂಜಾನೆ ಸಂದೇಶ ಕಳುಹಿಸಿದ್ರೆ ನಿಮ್ಮವರ ದಿನ ಖುಷಿಯಾಗಿರುತ್ತದೆ. ಹಾಗಾಗಿ ಇಂಥಹ ಹೊಸ ಪ್ರಯತ್ನಗಳಿಗೆ ಕೈ ಹಾಕಿ.