ರಾಸಾಯನಿಕಯುಕ್ತ ಹೇರ್ ಡೈ ಬಳಸಿ ಕೂದಲು ಕಪ್ಪಾಗಿಸುವ ಬದಲು ಮನೆಯಲ್ಲಿ ತಯಾರಿಸಿದ ನೈಸರ್ಗಿಕ ಉತ್ಪನ್ನಗಳಿಂದ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಉಪಾಯವನ್ನು ತಿಳಿಯೋಣ.
ಕಬ್ಬಿಣದ ತವಾಗೆ ಒಣ ಬೆಟ್ಟದ ನೆಲ್ಲಿಕಾಯಿಯ ಪುಡಿಯನ್ನು ನಾಲ್ಕು ಚಮಚದಷ್ಟು ತೆಗೆದುಕೊಂಡು ಬಣ್ಣ ಬದಲಾಗುವ ತನಕ ಬಿಸಿ ಮಾಡಿ, ಕಾಮಕಸ್ತೂರಿ ಬೀಜ ನಾಲ್ಕು ಚಮಚ ಹಾಕಿ. ನಂತರ ಎರಡು ಲೋಟ ನೀರನ್ನು ಹಾಕಿ ರಾತ್ರಿ ಪೂರ್ತಿ ಮುಚ್ಚಿ ಇಡಿ. ಬೆಳಿಗ್ಗೆ ಮುಚ್ಚಳ ತಗೆದಾಗ ಕಾಮಕಸ್ತೂರಿ ಬೀಜ ಊದಿಕೊಂಡಿರುತ್ತದೆ. ಅದನ್ನು ಸೋಸಿಕೊಳ್ಳಿ. ಆಗ ನೀರು ಬೇರ್ಪಡುತ್ತದೆ. ಅದೇ ಕೂದಲಿನ ಔಷಧಿ.
ಇದನ್ನು ಕೂದಲಿನ ಬುಡಕ್ಕೆ ಹಚ್ಚಬೇಕು. ಕಪ್ಪು ಬಣ್ಣದ ಈ ಮದ್ದು ಕೂದಲಿಗೂ ಅದೇ ಬಣ್ಣ ನೀಡುತ್ತದೆ. ಇದು 24 ಗಂಟೆಗಳ ಕಾಲ ಮಾತ್ರ ಪರಿಣಾಮಕಾರಿ. ತಲೆ ಸ್ನಾನ ಮಾಡಿದ ನಂತರ ಉಳಿಯುವುದಿಲ್ಲ. ಕೂದಲು ಬೆಳೆಯಲು ಮತ್ತು ಉದುರದಂತೆ ತಡೆಯಲು ಇದು ಉಪಕಾರಿ.