ಮುಟ್ಟು ನೈಸರ್ಗಿಕ ಕ್ರಿಯೆ. ಪ್ರತಿಯೊಬ್ಬ ಮಹಿಳೆ ತಿಂಗಳಲ್ಲಿ ಮೂರು ದಿನ ಮುಟ್ಟಿನ ಸಮಸ್ಯೆ ಎದುರಿಸುತ್ತಾಳೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಮುಟ್ಟಿನ ಸಂದರ್ಭದಲ್ಲಿ ಕಿರಿಕಿರಿ, ನೋವು ಸಾಮಾನ್ಯ. ಕೆಲವೊಮ್ಮೆ ಹೊರಗೆ ಹೋಗುವ ಸಮಯದಲ್ಲಿ ಮುಟ್ಟು ಕಾಡುತ್ತದೆ. ಮನೆಯಲ್ಲಿ ಪೂಜೆಯಿದ್ದಾಗ ಇಲ್ಲವೆ ಮನೆಗೆ ಸಂಬಂಧಿಕರು ಬರುವ ಸಂದರ್ಭದಲ್ಲಿ ಇಲ್ಲವೆ ಬೇರೆ ವಿಶೇಷ ಸಮಯದಲ್ಲಿ ಮುಟ್ಟು ಕಾಡುತ್ತದೆ.
ಇದನ್ನು ಮೂರ್ನಾಲ್ಕು ದಿನ ಮುಂದೂಡಲು ಮಹಿಳೆಯರು ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಔಷಧಿ ಮೊರೆ ಹೋಗ್ತಾರೆ. ಆದ್ರೆ ಯಾವುದೇ ಔಷಧಿಯಿಲ್ಲದೆ ಮನೆ ಮದ್ದಿನ ಮೂಲಕವೆ ಮುಟ್ಟನ್ನು ಮುಂದೂಡಬಹುದು.
ಮುಟ್ಟು ಮುಂದೂಡಲು ಬಯಸುವವರು ಮಸಾಲೆಯುಕ್ತ ಆಹಾರ ಸೇವನೆ ಮಾಡಬೇಡಿ. ಮೆಣಸಿನ ಕಾಯಿ ಸೇವನೆ ಮಾಡಬೇಡಿ. ಬೆಳ್ಳುಳ್ಳಿ ಸೇವನೆ ಮಾಡಬೇಡಿ. ಮಸಾಲೆಯುಕ್ತ ಆಹಾರ ಸೇವನೆ ಮಾಡುವುದ್ರಿಂದ ರಕ್ತದ ವೇಗ ಹೆಚ್ಚಾಗುತ್ತದೆ. ಇದ್ರಿಂದ ಮುಟ್ಟು ಬೇಗ ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮುಟ್ಟು ಮುಂದೂಡಲು ಬಯಸುವವರು ಮಸಾಲೆ ಆಹಾರ ಸೇವಿಸಬೇಡಿ.
ಮುಟ್ಟಿನ ವಿಳಂಬಕ್ಕೆ ವಿನೆಗರ್ ಪರಿಣಾಮಕಾರಿ. ಇದಕ್ಕಾಗಿ 3 ರಿಂದ 4 ಟೀ ಚಮಚ ವಿನೆಗರನ್ನು ಒಂದು ಲೋಟ ನೀರಿಗೆ ಹಾಕಿ ದಿನಕ್ಕೆ ಎರಡು ಬಾರಿ ಸೇವಿಸಿ. ಇದರಿಂದ ಮುಟ್ಟು 3 ರಿಂದ 4 ದಿನಗಳವರೆಗೆ ಮುಂದೆ ಹೋಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ಇದು ಹೆಚ್ಚು ಆಮ್ಲವನ್ನು ಹೊಂದಿರುತ್ತದೆ. ಮುಟ್ಟಿನ ದಿನಾಂಕ ಬರುವ ಸುಮಾರು 10 ರಿಂದ 12 ದಿನಗಳ ಮೊದಲು, 2 ರಿಂದ 3 ಬಾರಿ ಬಿಸಿನೀರಿನೊಂದಿಗೆ ವಿನೇಗರ್ ಸೇವಿಸಿದರೆ ಮುಟ್ಟು ಮುಂದೂಡಲ್ಪಡುತ್ತದೆ.
ಓಂ ಕಾಳಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದ್ರಿಂದ ಮುಟ್ಟು ಮುಂದೆ ಹೋಗುತ್ತದೆ. ಎಲೆಗಳನ್ನು ಕುದಿಸಿ ಜೇನುತುಪ್ಪ ಬೆರೆಸಿ ದಿನಾಂಕಕ್ಕಿಂತ 7 ದಿನಗಳ ಮೊದಲು ಕುಡಿಯಲು ಪ್ರಾರಂಭಿಸಬೇಕು.