ನಿಮ್ಮ ತುಟಿಗಳು ಕೆಂಪಾಗಿ ಕಾಣುವಂತೆ ಮಾಡಬೇಕೆ? ಇದಕ್ಕೆ ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸಬಹುದು. ಅದು ಹೇಗೆಂದು ಇಲ್ಲಿ ಕೇಳಿ.
ಕಾಸ್ಮೆಟಿಕ್ಸ್ ಗಳ ಹೊರತಾಗಿಯೂ ನಿಮ್ಮ ತುಟಿಯ ಬಣ್ಣವನ್ನು ಕೆಂಪಗಾಗಿಸಿಕೊಳ್ಳಬಹುದು. ಸ್ಟ್ರಾಬೆರಿ ಹಣ್ಣಿನ ಪೇಸ್ಟ್ ತಯಾರಿಸಿ ಅಥವಾ ಅದರ ರಸವನ್ನು ನಿಮ್ಮ ತುಟಿಗೆ ನಿತ್ಯ ಹಚ್ಚಿಕೊಳ್ಳುವುದರಿಂದ ನಿಮ್ಮ ತುಟಿ ಸಹಜವಾದ ಕೆಂಪು ಬಣ್ಣವನ್ನೇ ಪಡೆಯುತ್ತದೆ.
ಗುಲಾಬಿ ದಳಗಳೂ ಇವೇ ಪ್ರಭಾವವನ್ನು ಬೀರುತ್ತವೆ. ಮೊದಲು ಕೆಂಗುಲಾಬಿಯ ನಾಲ್ಕೈದು ಎಸಳುಗಳನ್ನು ರುಬ್ಬಿ ಅದರ ರಸ ತೆಗೆದು ತುಟಿಗೆ ಹಚ್ಚಿ 15 ನಿಮಿಷದ ಬಳಿಕ ನಿಮ್ಮ ತುಟಿಗಳನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ತುಟಿಗಳು ಕೆಂಪು ಬಣ್ಣ ಪಡೆದುಕೊಳ್ಳುತ್ತವೆ.
ಬೀಟ್ ರೂಟ್ ಕೂಡಾ ನಿಮ್ಮ ತುಟಿ ಸೌಂದರ್ಯ ಹೆಚ್ಚಿಸಲು ನೆರವಾಗುತ್ತವೆ. ಇದನ್ನು ನಿಮ್ಮ ತುಟಿಗೆ ಉಜ್ಜಿದರೆ ಹಲವು ಗಂಟೆಗಳ ಕಾಲ ಕೆಂಪಗಾಗಿಯೇ ಕಾಣಿಸುತ್ತದೆ.