ಚಿಕ್ಕ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯುವುದು ಸಹಜ. ಆದರೆ ಕೆಲವೊಮ್ಮೆ ದೊಡ್ಡವರ ಬಾಯಲ್ಲೂ ಅವರಿಗೆ ತಿಳಿಯದಂತೆ ಜೊಲ್ಲು ಸುರಿಯುತ್ತಿರುತ್ತದೆ.
ರಾತ್ರಿ ನಿದ್ದೆಯಲ್ಲೂ ಕೂಡ ಹೆಚ್ಚಿನವರ ಬಾಯಲ್ಲಿ ಜೊಲ್ಲು ಸುರಿಯುತ್ತದೆ. ಇದನ್ನು ತಡೆಗಟ್ಟಲು ಇಲ್ಲಿದೆ ನೋಡಿ ಮನೆಮದ್ದು.
* ದಿನಕ್ಕೆ ಎರಡು ಲವಂಗವನ್ನು ಬಾಯಲ್ಲಿ ಅಗಿದರೆ ಹೆಚ್ಚು ಜೊಲ್ಲು ಬರುವುದು ನಿಲ್ಲುತ್ತದೆ. ಚಕ್ಕೆ ಪುಡಿಯನ್ನು ನೀರಲ್ಲಿ ಬೆರೆಸಿ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಜೊಲ್ಲು ಕಡಿಮೆಯಾಗುತ್ತದೆ.
* ಅಡಿಕೆ ಚೂರನ್ನು ಪುಡಿ ಮಾಡಿ ಜೇನುತುಪ್ಪದ ಜೊತೆ ಕಲಸಿ ಬಾಯಿಯೊಳಗೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆದರೆ ಉತ್ತಮ ಪರಿಣಾಮ ಬೀರುತ್ತದೆ. ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಊಟದ ನಂತರ ಸೇವಿಸಿದರೆ ಜೊಲ್ಲು ಕಡಿಮೆಯಾಗುತ್ತದೆ.
* ಕರಿಮೆಣಸಿನ ಪುಡಿ, ಶುಂಠಿ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಹೆಚ್ಚು ಸುರಿಯುವ ಜೊಲ್ಲು ನಿಲ್ಲುತ್ತದೆ. ಏಲಕ್ಕಿಯನ್ನು ನೀರಲ್ಲಿ ಸೇರಿಸಿ ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.
* ಕಾಫಿ ಬೀಜದ ಪುಡಿಯನ್ನು ನಾಲಿಗೆ ಕೆಳಗೆ ಇಟ್ಟುಕೊಂಡರೆ ಅತಿ ಹೆಚ್ಚು ಜೊಲ್ಲು ನಿಲ್ಲುತ್ತದೆ. ಹಸಿ ಶುಂಠಿಯನ್ನು ನೀರಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಅತಿ ಜೊಲ್ಲು ಸಮಸ್ಯೆ ನಿವಾರಣೆಯಾಗುತ್ತದೆ.