ಪೈಲ್ಸ್ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಇದಕ್ಕೆ ವೈದ್ಯರ ಚಿಕಿತ್ಸೆ ಅನಿವಾರ್ಯ. ಹೀಗಿದ್ದೂ ಕೆಲವು ಮನೆ ಮದ್ದುಗಳ ಮೂಲಕ ಇದರ ನೋವಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಪೈಲ್ಸ್ ಸಮಸ್ಯೆ ಇದ್ದವರು ನಾರಿನಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಸೇವಿಸುವುದು ಬಹಳ ಮುಖ್ಯ. ತರಕಾರಿಗಳಲ್ಲಿ ಹಾಗೂ ಇಡೀ ಕಾಳುಗಳಲ್ಲಿ ನಾರಿನ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ನಿತ್ಯ ಇವುಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ.
ಅರಿಶಿನಪುಡಿಗೆ ಕಾಲು ಚಮಚ ಸಾಸಿವೆ ಎಣ್ಣೆ, ಮೂರು ಹನಿಗಳಷ್ಟು ಈರುಳ್ಳಿ ರಸವನ್ನು ಬೆರೆಸಿ. ಈ ಪೇಸ್ಟನ್ನು ರಾತ್ರಿ ಮಲಗುವ ಸಂದರ್ಭದಲ್ಲಿ ಪೈಲ್ಸ್ ಉಂಟಾಗಿರುವ ಜಾಗಕ್ಕೆ ಹಚ್ಚಿ. ಇದರಿಂದ ನೋವು ಕಡಿಮೆಯಾಗುತ್ತದೆ. ಅಲೋವೆರಾ ಜೆಲ್ ಅನ್ನು ಇದೇ ರೀತಿ ಹಚ್ಚಿಕೊಳ್ಳಬಹುದು.
ನಿತ್ಯ ಆಹಾರದಲ್ಲಿ ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಿ. ಮೂಲಂಗಿ, ಹಸಿರು ಸೊಪ್ಪುಗಳನ್ನು ವಾರದಲ್ಲಿ ಮೂರು ಬಾರಿಯಾದರೂ ಮರೆಯದೆ ತಿನ್ನಿ. ಸಾಕಷ್ಟು ನೀರು ಕುಡಿಯಿರಿ. ಮಲಬದ್ಧತೆ ಉಂಟುಮಾಡುವ ಆಹಾರದಿಂದ ದೂರವಿರಿ.