ಕಿಡ್ನಿಸ್ಟೋನ್ ಎಂದ ಕೂಡಲೇ ಭಯ ಬೇಡ. ಹಾಗೆಂದು ನಿರ್ಲಕ್ಷ್ಯವೂ ಸಲ್ಲದು. ಸಣ್ಣ ಪ್ರಮಾಣದ ಕಿಡ್ನಿಸ್ಟೋನ್ ಇದ್ದರೆ ಮನೆಮದ್ದಿನಿಂದಲೇ ಅದನ್ನು ಪರಿಹಾರ ಮಾಡಿಕೊಳ್ಳಬಹುದು. ಸರಿಯಾದ ಆಹಾರ ಕ್ರಮ ಅನುಸರಿಸಿದ್ರೆ ಕಿಡ್ನಿ ಸ್ಟೋನ್ ಮನೆಯಲ್ಲೇ ಕರಗುವ ಸಾಧ್ಯತೆ ಇರುತ್ತದೆ. ಹಾಗಾದರೇ ಯಾವೆಲ್ಲಾ ಮನೆಮದ್ದುಗಳು ಕಿಡ್ನಿಸ್ಟೋನ್ ನಿವಾರಿಸಲು ನೆರವಾಗುತ್ತದೆ ಬನ್ನಿ ನೋಡೋಣ.
ಬಾಳೆದಿಂಡಿನ ಜ್ಯೂಸ್ : ಕಿಡ್ನಿ ಸ್ಟೋನ್ ಇರುವವರು ಬೆಳಿಗ್ಗೆ ಮತ್ತು ಸಂಜೆ ಬಾಳೆ ದಿಂಡಿನ ರಸ ಸೇವಿಸುವುದರಿಂದ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ. ಕಿಡ್ನಿ ಸ್ಟೋನ್ ಬಾರದಂತೆ ನಿಯಂತ್ರಿಸಲು ವಾರದಲ್ಲಿ ಒಮ್ಮೆಯಾದರೂ ಬಾಳೆ ದಿಂಡಿನ ಪಲ್ಯ ಸೇವಿಸಿ.
ನಿಂಬೆ ಹಣ್ಣಿನ ಜ್ಯೂಸ್ : ಜೇನುತುಪ್ಪದೊಂದಿಗೆ ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಕರಗುವ ಸಾಧ್ಯತೆ ಇರುತ್ತದೆ.
ಬಾರ್ಲಿ ನೀರು : 3 ಲೀಟರ್ ನೀರಿಗೆ ಒಂದು ಹಿಡಿ ಬಾರ್ಲಿ ಹಾಕಿ ಕುದಿಸಿ, ಬೆಳಗ್ಗಿನಿಂದ ರಾತ್ರಿಯವರೆಗೆ ಆ ನೀರನ್ನು ಕುಡಿಯುತ್ತಾ ಬಂದಲ್ಲಿ ಕಿಡ್ನಿ ಸ್ಟೋನ್ ಕರಗಿ ಹೋಗುವ ಸಾಧ್ಯತೆ ಇರುತ್ತದೆ.
ಎಳನೀರು : ಪ್ರತಿ ನಿತ್ಯ 6- 7 ಎಳನೀರು ಕುಡಿಯುವುದರಿಂದ ಕಿಡ್ನಿಸ್ಟೋನ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಈ ಸಮಯದಲ್ಲಿ ಯಾವುದೇ ಆಹಾರ ಸೇವನೆ ಬೇಡ.
3 ಲೀಟರ್ ನೀರು ಕುಡಿಯಿರಿ : ಪ್ರತಿದಿನ 3-4 ಲೀಟರ್ ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಹತ್ತಿರವೂ ಸುಳಿಯುವುದಿಲ್ಲ. ಇನ್ನೂ ಈಗ ಬೇಸಿಗೆಯಾಗಿರುವುದರಿಂದ ದೇಹ ಡೀ ಹೈಡ್ರೇಟ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಪ್ಪದೇ ನೀರು ಕುಡಿಯಿರಿ.
ಈ ಎಲ್ಲಾ ಮನೆ ಮದ್ದುಗಳು ಸಣ್ಣ ಪ್ರಮಾಣದ ಕಿಡ್ನಿ ಸ್ಟೋನ್ ನಿವಾರಣೆಗೆ ಮಾತ್ರ ಪರಿಹಾರವಾಗಿದೆ. ಯಾವುದೇ ಮನೆಮದ್ದನ್ನು ಅನುಸರಿಸುವ ಮುನ್ನ ನಿಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಪಾಲಿಸಿ. ಈ ಹಿನ್ನೆಲೆಯಲ್ಲಿ ನಿಮ್ಮ ವೈದ್ಯರ ಸಲಹೆ ಪಡೆಯುವುದು ಅನುಸರಿಸುವುದು ಸೂಕ್ತ.