ಹದಿ ಹರೆಯದವರನ್ನು ಕಾಡೋ ಮೊಡವೆ ಸಮಸ್ಯೆಗೆ ಇಂಥಹದ್ದೇ ಕಾರಣ ಎಂದು ಹೇಳಲು ಕಷ್ಟ. ಈಗಿನ ಫಾಸ್ಟ್ ಲೈಫ್, ಜಂಕ್ ಫುಡ್ ಒಂದು ಕಾರಣವೂ ಹೌದು. ಮೊಡವೆಗಳನ್ನು ನಿಯಂತ್ರಿಸಲು ಇಲ್ಲಿವೆ ಟಿಪ್ಸ್.
1. ಲೋಳೆಸರದ ಒಳಭಾಗವನ್ನು ತೆಗೆದು ಪ್ರತಿ ದಿನ ರಾತ್ರಿ ಮುಖಕ್ಕೆ ಹಚ್ಚಿದರೆ ಸಣ್ಣ ಸಣ್ಣ ಕಪ್ಪು ಮೊಡವೆಗಳು ಗುಣವಾಗುತ್ತದೆ.
2. ರಕ್ತದ ದೋಷದಿಂದ ಆಗುವ ಕೆಂಪು ಮೊಡವೆಗೆ ಸೋಗದೆ ಬೇರಿನ ಶರಬತ್ತನ್ನು ನಿಯಮಿತವಾಗಿ ಸೇವಿಸಬೇಕು.
3. ಶ್ರೀಗಂಧವನ್ನು ಗುಲಾಬಿ ನೀರಿನಲ್ಲಿ ಕಲಸಿ ಕೀವಾಗಿರುವ ಕೆಂಪಗಿನ ಮೊಡವೆಗೆ ಹಚ್ಚಬೇಕು.
4. ದಪ್ಪ ಮೊಡವೆಗಳಿಂದ ನೋವು ಮತ್ತು ತುರಿಕೆ ಹೆಚ್ಚಿದ್ದರೆ, ಇಂಗನ್ನು ಬೆಚ್ಚಗಿರುವ ನೀರಿನಲ್ಲಿ ತೇದು ಮೊಡವೆ ಸುತ್ತಲೂ ಲೇಪಿಸಿದರೆ ತುರಿಕೆ ಕಡಿಮೆಯಾಗುತ್ತದೆ.
5. ಜೀರಿಗೆ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಪಿತ್ತ ಹಾಗೂ ರಕ್ತದಿಂದ ಆಗುವ ಮೊಡವೆ ನಿವಾರಣೆಯಾಗುತ್ತದೆ.
6. ಒಂದು ಬಟ್ಟಲು ಹಾಲಿಗೆ 5 ಚಮಚ ನಿಂಬೆ ರಸ ಮತ್ತು ಒಂದು ಚಮಚ ಗ್ಲಿಸರಿನ್ ಕಲಸಿ ಮುಖಕ್ಕೆ ಲೇಪನ ಮಾಡಿದರೆ ಮೊಡವೆ ಕಡಿಮೆಯಾಗುತ್ತದೆ.
7. ಮೊಡವೆಗಳು ದಪ್ಪವಾಗಿ ನೋವಿದ್ದರೆ ನಿಂಬೆ ರಸಕ್ಕೆ ಕರಿಮೆಣಸಿನ ಪುಡಿ ಸೇರಿಸಿ ಹಚ್ಚಿದರೆ ಮೊಡವೆ ಬೇಗ ಮಾಯವಾಗುತ್ತದೆ.
8. ಬೆಟ್ಟದ ನೆಲ್ಲಿಕಾಯಿಯ ರಸವನ್ನು ಖಾಲಿ ಹೊಟ್ಟೆಗೆ ನೀರಿನ ಜೊತೆ ಸೇವಿಸಿದರೆ ರಕ್ತ ಶುದ್ಧವಾಗಿ ಮೊಡವೆ ಕಡಿಮೆಯಾಗುತ್ತದೆ.