ಚಳಿಗಾಲದಲ್ಲಿ ದೇಹದ ಗುಪ್ತ ಅಂಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಹೆಚ್ಚು. ಆ ಭಾಗಗಳಿಗೆ ಸರಿಯಾಗಿ ಗಾಳಿಯಾಡದಿರುವುದು ಇದಕ್ಕೆ ಮುಖ್ಯ ಕಾರಣ.
ಈ ತುರಿಕೆ ಕೆಲವು ಕಜ್ಜಿಗಳಾಗಿ ಬದಲಾಗಿ ವಿಪರೀತ ತೊಂದರೆ ಕೊಡಬಹುದು.
ಗುಪ್ತ ಭಾಗಗಳಲ್ಲಿ ಬೆವರು ಹೆಚ್ಚು ಹೊತ್ತು ನಿಂತು ಅವು ಫಂಗಸ್ ಗಳಾಗಿ ಬದಲಾಗಿ ನಿಮಗೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಮುಜುಗರವನ್ನೂ ಉಂಟು ಮಾಡುತ್ತದೆ. ಸಕ್ಕರೆ ಕಾಯಿಲೆ ಇದ್ದವರಿಗಂತೂ ಈ ತುರಿಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಇದರ ನಿವಾರಣೆಗೆ ನೀವು ಮಾಡಬೇಕಾಗಿರುವುದಿಷ್ಟೆ. ಸ್ನಾನ ಮಾಡಿದ ಬಳಿಕ ಸ್ವಚ್ಛವಾದ ಬಟ್ಟೆಯಿಂದ ಈ ಭಾಗಗಳನ್ನು ಒರೆಸಿ. ಒದ್ದೆ ಪಸೆ ಉಳಿಯದಂತೆ ನೋಡಿಕೊಳ್ಳಿ. ವ್ಯಾಯಾಮ ಅಥವಾ ಜಿಮ್ ಮಾಡಿ ಬಂದಾಕ್ಷಣ ಒಳಉಡುಪು ಸೇರಿದಂತೆ ಎಲ್ಲಾ ಬಟ್ಟೆ ಬದಲಾಯಿಸಿ.
ಉತ್ತಮ ದರ್ಜೆಯ ಕಾಟನ್ ಬಟ್ಟೆಗಳನ್ನೇ ಧರಿಸಿ. ತೇವಾಂಶ ಹೀರಿಕೊಳ್ಳುವ ಪೌಡರ್ ಹಾಕಿಕೊಳ್ಳುವುದೂ ಒಳ್ಳೆಯದು. ಅಂಡರ್ ವೇರ್ ನಲ್ಲಿ ಸೋಪಿನ ಅಂಶಗಳು ಉಳಿಯದಂತೆ ನೋಡಿಕೊಳ್ಳಿ.