
ಬಿಳಿ ಕೂದಲಿನ ಸಮಸ್ಯೆ ಈಗ ಹೊಸತಲ್ಲ. ವಯಸ್ಸಾದ ಮೇಲೆ ಕಾಡುತ್ತಿದ್ದ ಬಿಳಿ ಕೂದಲಿನ ಸಮಸ್ಯೆ ಈಗ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ.
ಕೂದಲಿಗೆ ಬಣ್ಣ ಬಳಿದು ಕೂದಲನ್ನು ಕಪ್ಪಾಗಿಸುವುದು ಕ್ಷಣಿಕ. ಆದ್ರೆ ಮನೆ ಮದ್ದಿನಿಂದ ಸುಲಭವಾಗಿ ಕೂದಲನ್ನು ಕಪ್ಪಗೆ ಮಾಡಬಹುದು.
ಕಪ್ಪು ಕೂದಲಿಗೆ ನೆಲ್ಲಿಕಾಯಿ ಬಹಳ ಒಳ್ಳೆಯದು. ನೆಲ್ಲಿಕಾಯಿ ರಸಕ್ಕೆ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಂಡ್ರೆ ಕೂದಲು ಕಪ್ಪಾಗುತ್ತದೆ.
ಶುಂಠಿ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚಿ. ಇದು ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದ್ರಿಂದ ಕೂದಲು ಕಪ್ಪಗಾಗಿ ಹೊಳೆಯುತ್ತದೆ.
ಕೂದಲಿಗೆ ಪ್ರತಿದಿನ ಸಾಸಿವೆ ಎಣ್ಣೆ ಹಚ್ಚುವುದ್ರಿಂದ ಕೂದಲು ಕಪ್ಪಗಾಗುತ್ತದೆ.
ಮೆಹಂದಿ ಜೊತೆ ಮೊಸರು ಬೆರೆಸಿ ಪೇಸ್ಟ್ ಮಾಡಿ. ವಾರದಲ್ಲಿ ಎರಡು ಬಾರಿ ಈ ಪೇಸ್ಟನ್ನು ಕೂದಲಿಗೆ ಹಚ್ಚುತ್ತ ಬಂದ್ರೆ ಬಿಳಿ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ.
ಬಿಳಿ ಕೂದಲಿಗೆ ಅಲೋವೇರಾ ಹಚ್ಚುವುದ್ರಿಂದಲೂ ಸಾಕಷ್ಟು ಲಾಭವಿದೆ.