ನಿತ್ಯ ಕುಡಿಯುವ ನೀರು ಬದಲಾದರೆ, ತಣ್ಣಗಿನ ತಿನಿಸು, ಜ್ಯೂಸ್ ಅಥವಾ ಮತ್ತೇನಾದರೂ ಸೇವಿಸಿದರೆ ಗಂಟಲು ಕೆರೆತ ಕಾಣಿಸಿಕೊಳ್ಳುತ್ತದೆ. ಅದೂ ಈ ಮಳೆಗಾಲ ಹಾಗು ಚಳಿಗಾಲದಲ್ಲಿ ಬಹುಬೇಗ. ಮನೆಮದ್ದಿನ ಮೂಲಕ ಇದನ್ನು ಸುಲಭವಾಗಿ ಬಗೆಹರಿಸಬಹುದು.
ಒಂದು ಲೋಟ ನೀರನ್ನು ಕುದಿಸಿ, ತಣಿಸಿ. ಕುಡಿಯುವ ಹದಕ್ಕೆ ಬಂದಾಗ ಲಿಂಬೆರಸ ಸೇರಿಸಿ. ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಇದರಿಂದ ಗಂಟಲಿನ ಕಿರಿಕಿರಿ ಸಮಸ್ಯೆ ದೂರವಾಗುತ್ತದೆ.
ಶುಂಠಿಯ ಸಿಪ್ಪೆ ತೆಗೆದು ತುರಿದು ಇಟ್ಟುಕೊಳ್ಳಿ. ಇದಕ್ಕೆ ಜೇನು ತುಪ್ಪ ಸೇರಿಸಿ ಆಗಾಗ ಬಾಯಿಗೆ ಹಾಕಿ ಜಗಿಯುವುದರಿಂದ ಕಟ್ಟಿದ ಗಂಟಲಿನ ಸಮಸ್ಯೆಯಿಂದ ಬಿಡುಗಡೆ ಸಿಗುತ್ತದೆ. ಶುಂಠಿ ಗಂಟಲಿನ ಟಾಕ್ಸಿನ್ ಕಡಿಮೆ ಮಾಡಿ ಬ್ಯಾಕ್ಟೀರಿಯಾವನ್ನು ದೂರ ಮಾಡುತ್ತದೆ. ಅಡ್ಡ ಪರಿಣಾಮ ಬೀರದ ಈ ಮನೆಮದ್ದು ಬಲುಪಯೋಗಿ.