
ಬಾಯಿ ಹುಣ್ಣು ಮಕ್ಕಳನ್ನು, ಹಿರಿಯರನ್ನು ಬಿಡದೆ ಕಾಡುವ ಒಂದು ಸಾಮಾನ್ಯ ಸಮಸ್ಯೆ. ದೇಹದ ಉಷ್ಣತೆ ಹೆಚ್ಚಾದಾಗ ಬಾಯಿಯೊಳಗೂ ಹುಣ್ಣು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಹೆಚ್ಚಿನ ಖಾರ, ಮಸಾಲೆ ಸೇವಿಸಿದ ಮರು ದಿನವೇ ಕಾಣಿಸಿಕೊಳ್ಳುತ್ತದೆ.
ಇದಕ್ಕೆ ಮುಖ್ಯವಾಗಿ ವಿಟಮಿನ್ ಕೊರತೆ, ನಿದ್ರೆಯ ಕೊರತೆ ಕಾರಣವಿರಬಹುದು. ಜೇನುತುಪ್ಪದಿಂದ ಬಾಯಿ ಹುಣ್ಣಿನ ಸಮಸ್ಯೆ ನಿವಾರಿಸಿಕೊಳ್ಳಬಹುದು. ಇದಕ್ಕೆ ಚಿಟಿಕೆ ಅರಶಿನ ಸೇರಿಸಿ ಹುಣ್ಣಾದ ಜಾಗಕ್ಕೆ ಹಚ್ಚಿಕೊಂಡರೆ ಇದು ಮಾಯಿಸ್ಚರೈಸರ್ ಒದಗಿಸುತ್ತದೆ. ದಿನಕ್ಕೆ ನಾಲ್ಕು ಬಾರಿ ಇದನ್ನು ಹಚ್ಚಬಹುದು.
ತೆಂಗಿನೆಣ್ಣೆಯನ್ನು ಈ ಜಾಗಕ್ಕೆ ಹನಿಹನಿಯಾಗಿ ಹಾಕಿಕೊಳ್ಳುವ ಮೂಲಕವೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅಲೋವೇರಾ ಜ್ಯೂಸ್ ನಿಂದ ಬಾಯಿ ಮುಕ್ಕಳಿಸುವುದರಿಂದ ಇದರ ನೋವಿನ ತೀವ್ರತೆ ಕಡಿಮೆಯಾಗುತ್ತದೆ.
ದೇಹಕ್ಕೆ ತಂಪಿನ ಆಹಾರ ಸೇವಿಸುವುದು ಬಹಳ ಮುಖ್ಯ. ಸಾಧ್ಯವಾದರೆ ಎಳನೀರು ಕುಡಿಯಿರಿ. ಸೊಪ್ಪಿನ ತಂಬುಳಿ ಸೇರಿಸಿ ಊಟ ಮಾಡಿ. ತಾಜಾ ಹಣ್ಣಿನ ರಸ ಸೇವಿಸಿ. ಖಾರ ಮಸಾಲೆಗಳಿಂದ ದೂರವಿರಿ. ಹೀಗೆ ಮಾಡಿದರೆ ಎರಡರಿಂದ ಮೂರು ದಿನದಲ್ಲಿ ಬಾಯಿ ಹುಣ್ಣು ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.