ಉಪ್ಪಿನ ನೀರು ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದ ಸಮಸ್ಯೆ ನಿವಾರಣೆಯಾಗುತ್ತದೆ. ಉಪ್ಪಿನಲ್ಲಿನ ಸೋಡಿಯಂ ಅಂಶ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ನೀರಿನಲ್ಲಿ ಅತಿಯಾದ ಉಪ್ಪಿನಂಶ ಇದ್ದರೆ ಅದೂ ಒಳ್ಳೆಯದಲ್ಲ. ಹಾಗಾಗಿ ಉಪ್ಪನ್ನು ಮಿತವಾಗಿ ಬಳಸುವುದು ಒಳ್ಳೆಯದು.
ಕಾಫಿ
ಕಡಿಮೆ ರಕ್ತದೊತ್ತಡ ಇರುವವರಿಗೆ ಕಾಫಿ ಒಳ್ಳೆಯ ಪ್ರಭಾವ ಬೀರುತ್ತದೆ. ರಕ್ತದೊತ್ತಡ ಕಡಿಮೆಯಾದಾಗ ಸ್ಟ್ರಾಂಗ್ ಕಾಫಿ ಕುಡಿದಲ್ಲಿ ತಕ್ಷಣ ಪ್ರಭಾವ ಬೀರುತ್ತದೆ. ಇದರ ಹೊರತಾಗಿ ಚಾಕೊಲೇಟ್, ಕೋಲಾ ಮತ್ತು ಕೆಫೀನ್ ಯುಕ್ತ ಖಾದ್ಯ ಪದಾರ್ಥಗಳ ಸೇವನೆಯಿಂದಲೂ ರಕ್ತದೊತ್ತಡ ಸಾಮಾನ್ಯವಾಗುತ್ತದೆ.
ಕಾಬೂಲ್ ದ್ರಾಕ್ಷಿ
ರಾತ್ರಿಯಿಡಿ ನೀರಿನಲ್ಲಿ ನೆನಸಿಟ್ಟ ಕಾಬೂಲ್ ದ್ರಾಕ್ಷಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
ತುಳಸಿ
ತುಳಸಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಪೊಟಾಶಿಯಮ್, ಮೆಗ್ನೀಶಿಯಮ್ ಮುಂತಾದ ಸತ್ವಗಳು ಮೆದುಳು ಮತ್ತು ದೇಹವನ್ನು ಸುಃಸ್ಥಿತಿಯಲ್ಲಿಡುತ್ತವೆ.
ನಿಂಬು ನೀರು
ನೀರಿಗೆ ನಿಂಬುರಸ ಬೆರೆಸಿ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ.