
ಆಸಿಡಿಟಿ ಸಮಸ್ಯೆ ಎಲ್ಲರನ್ನೂ ಬಿಡದೆ ಕಾಡುತ್ತದೆ. ಅದರಲ್ಲೂ ಎದೆಯುರಿ ಸಮಸ್ಯೆ ಬಾಯಿಯ ರುಚಿಯನ್ನೇ ಹಾಳು ಮಾಡುತ್ತದೆ. ಗಂಟಲು ನೋವಿಗೂ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೇನು?
ಶುಂಠಿ ಚಹಾ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಸಿಡಿಟಿಯ ಲಕ್ಷಣವಾದ ಎದೆಯುರಿಯನ್ನು ಕಡಿಮೆ ಮಾಡುತ್ತದೆ.
ಆ್ಯಪಲ್ ಸೈಡರ್ ವಿನೆಗರ್ ಅನ್ನೂ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ನೋವು, ಉರಿ, ಅಸಿಡಿಟಿ ಕಡಿಮೆಯಾಗುತ್ತದೆ.
ಲೋಳೆಸರದ ರಸವನ್ನು ದಿನಕ್ಕೆ ಎರಡು ಬಾರಿ ಕುಡಿದರೂ ಜೀರ್ಣಾಂಗವ್ಯೂಹದ ಉರಿ ಕಡಿಮೆಯಾಗುತ್ತದೆ.
ಚ್ಯೂಯಿಂಗ್ ಗಮ್ ಜಗಿಯುವುದರಿಂದ ಲಾಲಾರಸದ ಉತ್ಪತ್ತಿಯಾಗುತ್ತದೆ. ಇದು ಎದೆಯುರಿ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ದೂರವಾಗುತ್ತವೆ.