ಕಿವಿ ನೋವಿಗೆ ಆರಂಭಿಕ ಹಂತದಲ್ಲಿ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ನೋವಿನ ಸಮಸ್ಯೆ ತೀವ್ರ ತರದ್ದಾದರೆ ವೈದ್ಯರನ್ನೇ ಸಂಪರ್ಕಿಸುವುದು ಒಳ್ಳೆಯದು. ಅಂಥ ಕೆಲವು ಮನೆಮದ್ದುಗಳು ಇಲ್ಲಿವೆ ಕೇಳಿ.
ಕಿವಿ ನೋವಿಗೆ ಉಪ್ಪನ್ನು ಮದ್ದಾಗಿ ಬಳಸಬಹುದು. ಒಂದು ಕಪ್ ಉಪ್ಪನ್ನು ಬಿಸಿ ಮಾಡಿ ಬಟ್ಟೆಯ ಮೇಲೆ ಹರಡಿ. ನೋವಿರುವ ಕಿವಿಯ ಮೇಲ್ಭಾಗದಲ್ಲಿ ಉಪ್ಪಿನ ಬಟ್ಟೆಯನ್ನು ಮೃದುವಾಗಿ ಒತ್ತಿ. ಹತ್ತರಿಂದ ಹದಿನೈದು ನಿಮಿಷ ಹೀಗೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
ಪಟಾಕಿ ಅಥವಾ ಇತರ ಯಾವುದೋ ದೊಡ್ಡ ಸದ್ದಿನಿಂದಾಗಿ ನಿಮ್ಮ ಶ್ರವಣ ಶಕ್ತಿ ಕಡಿಮೆಯಾಗಿದ್ದರೆ ಈರುಳ್ಳಿಯ ಅರ್ಧ ಭಾಗ ತೆಗೆದುಕೊಂಡು ನಿಮ್ಮ ಕಿವಿಯ ಸುತ್ತ ಮಸಾಜ್ ಮಾಡಿ. ಇದರಿಂದ ತುಸು ನೋವು ಶಮನವಾಗುತ್ತದೆ.
ತಾತ್ಕಾಲಿಕ ಶ್ರವಣ ಸಮಸ್ಯೆ ಇರುವವರು ಆ್ಯಪಲ್ ಸೈಡರ್ ವಿನೆಗರ್ ಅನ್ನು ಇದೇ ವಿಧಾನದಲ್ಲಿ ಬಳಸಬಹುದು. ಇದರಿಂದಲೂ ನೋವಿನ ಪ್ರಮಾಣ ಕಡಿಮೆಯಾಗಿ ಶ್ರವಣ ಶಕ್ತಿ ಮರುಕಳಿಸುವ ಸಾಧ್ಯತೆ ಇದೆ.