ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗನೆ ಶೀತ, ಕೆಮ್ಮುವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೆಮ್ಮು ಕಾಣಿಸಿಕೊಂಡರೆ ಮಕ್ಕಳ ದೇಹದ ತೂಕ ಕೂಡ ಬೇಗನೆ ಇಳಿಕೆಯಾಗುತ್ತದೆ. ಕೆಲವು ಮನೆ ಮದ್ದಿನಿಂದ ಮಕ್ಕಳಿಗೆ ಕಾಡುವ ಶೀತ-ಕೆಮ್ಮುವಿನ ಸಮಸ್ಯೆ ನಿವಾರಿಸಿಕೊಳ್ಳಬಹುದು.
ಸ್ವಲ್ಪ ಅರಿಶಿನಕ್ಕೆ ಬಿಸಿ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮಗುವಿನ ಎದೆ, ಹಣೆ, ಪಾದಗಳಿಗೆ ಹೆಚ್ಚಿ. ನಂತರ ಸ್ವಲ್ಪ ಸಮಯ ಬಿಟ್ಟು ಇದನ್ನು ತೊಳೆಯಿರಿ ಇದರಿಂದ ಕೆಮ್ಮಿನ ಪ್ರಭಾವ ಕಡಿಮೆಯಾಗುತ್ತದೆ.
ಇನ್ನು ಒಂದು ಕಪ್ ಸಾಸಿವೆ ಎಣ್ಣೆಗೆ , ಎರಡು ಎಸಳು ಬೆಳ್ಳುಳ್ಳಿ ಸ್ವಲ್ಪ ಕಾಳು ಜೀರಿಗೆ ಹಾಕಿ. ಇದರಿಂದ ಮಗುವಿನ ಪಾದ, ಅಂಗೈಗೆ ಹಾಕಿ ಮಸಾಜ್ ಮಾಡಿಕೊಳ್ಳಿ. ನಂತರ ಹತ್ತಿಯ ಬಟ್ಟೆಯ ಸಹಾಯದಿಂದ ಎಣ್ಣೆಯ ಪಸೆಯನ್ನು ಒರೆಸಿ ತೆಗೆಯಿರಿ.
ಒಂದು ಕಪ್ ನೀರಿಗೆ ಬೆಲ್ಲ 2 ಟೀ ಸ್ಪೂನ್, ಕಾಳುಮೆಣಸು-2. ಜೀರಿಗೆ ಒಂದು ಚಿಟಿಕೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಡಿ. ನಂತರ ಇದನ್ನು ಎರಡು ಟೀ ಸ್ಪೂನ್ ಮಕ್ಕಳಿಗೆ ಕುಡಿಸಿ. ಚಿಕ್ಕ ಮಗುವಿಗೆ ಬೇಡ.