ದೀಪಾವಳಿ ಹಬ್ಬದಲ್ಲಿ ದೀಪಗಳ ಜೊತೆ ಪಟಾಕಿ ಇರಲೇಬೇಕು. ಸಂಭ್ರಮದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ಪಟಾಕಿ ಆಪತ್ತಿಗೆ ಕಾರಣವಾಗುತ್ತದೆ. ಪಟಾಕಿ ಸಿಡಿಸುವ ವೇಳೆ ಮಾಡುವ ತಪ್ಪುಗಳು ಅನೇಕರ ಬೆಳಕನ್ನೇ ಕಿತ್ತುಕೊಂಡಿದೆ. ಪಟಾಕಿ ಹೊಡೆದಾಗ ಕೈ, ಮೈ ಸುಟ್ಟರೆ ತಕ್ಷಣ ಕೆಲವೊಂದು ಮನೆ ಮದ್ದು ಮಾಡಬೇಕು.
ಆಕಳ ತುಪ್ಪ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸುಟ್ಟ ಗಾಯಕ್ಕೂ ಆಕಳ ತುಪ್ಪ ಬೆಸ್ಟ್. ಸುಟ್ಟ ಜಾಗಕ್ಕೆ ಆಕಳ ತುಪ್ಪವನ್ನು ಹಚ್ಚಬೇಕು.
ತೆಂಗಿನ ಎಣ್ಣೆ ಚರ್ಮಕ್ಕೆ ಬಹಳ ಒಳ್ಳೆಯದು. ಚಳಿಗಾಲದಲ್ಲಿ ಚರ್ಮ ಕಾಂತಿಯುತವಾಗಿ ಮೃದುವಾಗಿರಲೆಂದು ತೆಂಗಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಳ್ತಾರೆ. ಆರೋಗ್ಯಕ್ಕೂ ಒಳ್ಳೆಯದಾಗಿರುವ ತೆಂಗಿನ ಎಣ್ಣೆ ಸುಟ್ಟ ಗಾಯವನ್ನು ಕಡಿಮೆ ಮಾಡುತ್ತದೆ. ಪಟಾಕಿ ಸಿಡಿಸುವ ವೇಳೆ ಸುಟ್ಟರೆ ಆ ಜಾಗಕ್ಕೆ ತೆಂಗಿನ ಎಣ್ಣೆ ಹಚ್ಚಿ. ಉರಿ ತಕ್ಷಣ ಕಡಿಮೆಯಾಗುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ದೇವಿ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡ ಇರುತ್ತದೆ. ಸುಟ್ಟ ಗಾಯಕ್ಕೆ ತಕ್ಷಣ ತುಳಸಿ ರಸವನ್ನು ಹಾಕಿ. ಉರಿ ಕಡಿಮೆಯಾಗುವ ಜೊತೆಗೆ ಸೋಂಕನ್ನು ತಡೆಯುತ್ತದೆ.
ಬೇಯಿಸಿದ ಆಲೂಗಡ್ಡೆ ಸುಟ್ಟ ಗಾಯಕ್ಕೆ ಒಳ್ಳೆ ಮದ್ದು. ಉರಿ ಕಡಿಮೆ ಮಾಡುವ ಜೊತೆ ಸುಟ್ಟ ಗಾಯದ ಕಲೆಯನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ.