alex Certify ಇಲ್ಲಿದೆ ‘ಉರಿ ಮೂತ್ರʼ ಸಮಸ್ಯೆ ನಿವಾರಣೆಗೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ‘ಉರಿ ಮೂತ್ರʼ ಸಮಸ್ಯೆ ನಿವಾರಣೆಗೆ ಮನೆ ಮದ್ದು

ಉರಿಮೂತ್ರದ ಸಮಸ್ಯೆ ಒಂದಲ್ಲೊಂದು ಬಾರಿ ನಿಮಗೆ ಕಾಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ…? ವಿಪರೀತ ಮಸಾಲೆ ಪದಾರ್ಥಗಳ ಸೇವನೆ ಹಾಗೂ ಸಾಕಷ್ಟು ನೀರು ಕುಡಿಯದಿರುವುದು. ದೇಹದಲ್ಲಿ ನಿರ್ಜಲೀಕರಣ ಆದಂತೆ ಮೂತ್ರ ಪಿಂಡಗಳ ಸಮಸ್ಯೆಯೂ ಹೆಚ್ಚುತ್ತದೆ.

ವೈದ್ಯಕೀಯ ಭಾಷೆಯಲ್ಲಿ ಡಿಸುರಿಯಾ ಎಂದು ಕರೆಯಲ್ಪಡುವ ಈ ಸಮಸ್ಯೆ ನಿಮ್ಮನ್ನು ಮೂತ್ರ ವಿಸರ್ಜನೆ ವೇಳೆ ವಿಪರೀತ ನೋವಿನಿಂದ ಹಿಂಡಿ ಬಿಡುತ್ತದೆ. ಮಹಿಳೆಯರೇ ಈ ಸಮಸ್ಯೆ ಎದುರಿಸುವುದು ಹೆಚ್ಚು. ಇದರ ಲಕ್ಷಣಗಳು ಆರಂಭಿಕ ಎನಿಸಿದರೆ ಮಾತ್ರ ಮನೆಮದ್ದು ಪ್ರಯತ್ನಿಸಿ.

ಸಾಕಷ್ಟು ನೀರು ಅಥವಾ ದ್ರವ ಆಹಾರ ಸೇವಿಸಿ. ಇದರಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳೆಲ್ಲ ದ್ರವ ತ್ಯಾಜ್ಯದ ಮೂಲಕ ದೇಹದಿಂದ ಹೊರಹೋಗುತ್ತವೆ. ಮಳೆಗಾಲ ಎಂಬ ಕಾರಣಕ್ಕೆ ನಿರ್ಲಕ್ಷಿಸದೆ ಸಾಕಷ್ಟು ನೀರು ಕುಡಿಯಿರಿ.

ವಿಟಮಿನ್ ಸಿ ಅಂಶಗಳು ಹೆಚ್ಚಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಿಸುವ ಆಹಾರಗಳನ್ನು ಸೇವಿಸಿ. ಏಲಕ್ಕಿಯನ್ನು ಸೇವಿಸುವುದರಿಂದ ಕಿಡ್ನಿಯ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದು ಹಲವು ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಇದರಿಂದ ಮೂತ್ರ ಮಾಡುವಾಗಲಿನ ನೋವು ಮತ್ತು ಉರಿ ಕಡಿಮೆಯಾಗುತ್ತದೆ.

ಲವಂಗಕ್ಕೆ ವೈರಸ್ ಮತ್ತು ಪರಾವಲಂಬಿ ಜೀವಿಗಳನ್ನು ಸಾಯಿಸುವ ಗುಣವಿದೆ. ಹಾಗಾಗಿ ಆಹಾರ ರೂಪದಲ್ಲಿ ಅಥವಾ ಎಣ್ಣೆಯ ರೂಪದಲ್ಲಿ ಲವಂಗವನ್ನು ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...