ಮೊಡವೆಯೇ ಕಿರಿಕಿರಿ. ಹೀಗಿರುವಾಗ ಅದು ಮೂಗಿನೊಳಗೆ ಹೋಗಿ ಸೇರಿಕೊಂಡರೆ. ಹೇಗಿರಬೇಡ. ಇದು ನೀಡುವ ನೋವಿನ ಪ್ರಮಾಣ ಮಾತ್ರ ಅಗಾಧ.
ಮೂಗಿನ ಮೇಲೆ ಬೆಚ್ಚಗಿನ ಶಾಖ ನೀಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ ಮತ್ತು ಪೀಡಿತ ಪ್ರದೇಶದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ.
ರೋಸ್ಮೆರಿ ಎಣ್ಣೆಗೆ ನೋವು ನಿವಾರಕ ಗುಣವಿದೆ. ಇದು ಅಂಟಿ ಮೈಕ್ರೊಬಿಯಲ್, ಅಂಟಿ ಅಕ್ಸಿಡೆಂಟ್, ನಂಜು ನಿರೋಧಕ ಮತ್ತು ಶಿಲೀಂಧ್ರ ನಾಶಕ ಗುಣವನ್ನು ಹೊಂದಿದೆ.
ಇದರ ಎರಡು ಹನಿಗೆ ಐದು ಹನಿ ತೆಂಗಿನೆಣ್ಣೆ ಬೆರೆಸಿ ಮೊಡವೆಯಾದ ಸ್ಥಳಕ್ಕೆ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ. ರಾತ್ರಿ ಹಚ್ಚಿ ಮಲಗಿ ಬೆಳಗ್ಗೆ ತೊಳೆಯಿರಿ. ದಿನಕ್ಕೆರಡು ಬಾರಿ ಹೀಗೆ ಮಾಡಿ ನೋಡಿ.
ಬೇವಿನೆಣ್ಣೆಯನ್ನು ಬೆರಳಿನ ಸಹಾಯದಿಂದ ಮೊಡವೆ ಇರುವ ಭಾಗಕ್ಕೆ ಹಚ್ಚಿ. 30 ನಿಮಿಷ ಬಳಿಕ ತೊಳೆಯಿರಿ. ಇದನ್ನು ದಿನಕ್ಕೆ ಮೂರು ಬಾರಿ ಮಾಡಬಹುದು. ತೆಂಗಿನೆಣ್ಣೆ, ನಿಂಬೆ ಹಣ್ಣಿನ ರಸ, ಹೈಡ್ರೋಜನ್ ಪೆರಾಕ್ಸೈಡ್, ಅಪಲ್ ಸೈಡರ್ ವಿನೆಗರ್ ಅನ್ನು ಇದೇ ವಿಧಾನದಲ್ಲಿ ಬಳಸಬಹುದು.