ಗ್ಯಾಸ್ಟ್ರಿಕ್ ಸಮಸ್ಯೆ ಕೆಲವೊಬ್ಬರಿಗೆ ಏನನ್ನೂ ತಿನ್ನಲಾಗದ ಸ್ಥಿತಿಗೆ ದೂಡಿಬಿಡುತ್ತದೆ. ಹೊಟ್ಟೆಯುಬ್ಬರವೂ ಇದರ ಒಂದು ಲಕ್ಷಣವೇ. ಇದನ್ನು ಹೇಗೆ ತಪ್ಪಿಸಬಹುದು.
ನೀವು ಲಗುಬಗೆಯಿಂದ ಊಟ ಮಾಡಿದಾಗ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ನೀವು ನಿಧಾನವಾಗಿ ಮತ್ತು ಸರಿಯಾಗಿ ಜಗಿದು ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಕೆಲವೊಮ್ಮೆ ಸೋಡಾ ಸೇವನೆಯಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಹಾಗಾಗಿ ಆಲ್ಕೋಹಾಲ್ ಅಥವಾ ಇತರ ಬಾಟಲ್ ಜ್ಯೂಸ್ ಗಳ ಬದಲು ನೀರು ಕುಡಿಯಿರಿ.
ಉಪ್ಪು ಹಾಗೂ ಉಪ್ಪಿನಂಶ ಹೆಚ್ಚಿರುವ ಸಂಸ್ಕರಿತ ಆಹಾರಗಳಿಂದ ದೂರವಿರಿ. ಊಟವಾದ ತಕ್ಷಣ ಒಂದು ಕಪ್ ಮೊಸರು ಸೇವಿಸಿ. ಇದು ಹೆಚ್ಚಿನ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಉತ್ತಮ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.