ಹರೆಯದಲ್ಲಿ ಮೊಡವೆಗಳು ಕಾಡುವುದು ಸಹಜ. ಇದು ಜಗತ್ತಿನ ಎಲ್ಲಾ ಜನಾಂಗ, ವರ್ಗಗಳಲ್ಲಿ ಕಂಡು ಬರುತ್ತದೆ. ಕೆಲವರಿಗೆ ಅನುವಂಶೀಯತೆಯಿಂದ ಬರುತ್ತದೆ. ಮತ್ತೆ ಕೆಲವರಿಗೆ ಹಾರ್ಮೋನ್ ಏರುಪೇರಿನಿಂದ ಬರುತ್ತದೆ. ಇನ್ನು ಕೆಲವರಿಗೆ ತಿನ್ನುವ ಆಹಾರವು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಮನೆ ಮದ್ದುಗಳನ್ನು ಉಪಯೋಗಿಸಿ ಮೊಡವೆಗಳನ್ನು ನಿಯಂತ್ರಣದಲ್ಲಿಡಬಹುದು.
* ಬೇವಿನ ಎಲೆ ಮತ್ತು ಅರಿಶಿನ ಪುಡಿ ಪೇಸ್ಟ್ ಮಾಡಿ ಹಚ್ಚಿಕೊಂಡು 30 ರಿಂದ 40 ನಿಮಿಷ ಬಿಟ್ಟು ಮುಖ ತೊಳೆಯಿರಿ.
* ಸೌತೆಕಾಯಿ ಮತ್ತು ನಿಂಬೆರಸ ಸೇರಿಸಿ ಪೇಸ್ಟ್ ಮಾಡಿ, ಮೊಡವೆ ಆದ ಜಾಗಕ್ಕೆ ಹಚ್ಚಿಕೊಂಡರೆ ಬೇಗ ವಾಸಿಯಾಗುತ್ತದೆ.
* ನೇರಳೆ ಹಣ್ಣಿನ ಬೀಜವನ್ನು ಹಾಲಿನಲ್ಲಿ ತೇದು ಹಚ್ಚಿದರೆ ಮೊಡವೆ ಹೋಗುತ್ತದೆ.
* ಅರಿಶಿನ ಪುಡಿಯನ್ನು ಹಾಲಿನೊಂದಿಗೆ ಕಲೆಸಿ ಮಖಕ್ಕೆ ಲೇಪಿಸಬೇಕು. ಇದರಿಂದ ಮೊಡವೆ ಹಾಗೂ ಕಲೆ ಮಾಸಿ ಹೋಗುತ್ತವೆ.
* ಮುಖವನ್ನು ಶುಧ್ಧ ನೀರಿನಿಂದ ಮತ್ತು ಸದಾ ಒಂದೇ ತರಹದ ಸೋಪಿನಿಂದ ಆಗಾಗ ತೊಳಯುತ್ತಿರಬೇಕು.