ಬಜಾಜ್ ಆಟೋ ಕಂಪನಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಬಜಾಜ್ ಚೇತಕ್ – ಬ್ಲೂ 3202ನ ಹೊಸ ರೂಪಾಂತರ. ಈ ಸ್ಕೂಟರ್‌ನ ವಿಶೇಷತೆಯೆಂದರೆ ಇದು ಹಳೆಯ ಮಾದರಿಗಿಂತ ಅಗ್ಗವಾಗಿದೆ ಮತ್ತು ಹೆಚ್ಚಿನ ಮೈಲೇಜ್ ನೀಡುತ್ತದೆ. ಒಮ್ಮೆ ಚಾರ್ಜ್ ಮಾಡಿದ್ರೆ ಈ ಎಲೆಕ್ಟ್ರಿಕ್ ಸ್ಕೂಟರ್ 137 ಕಿಲೋಮೀಟರ್ ಓಡಬಲ್ಲದು.
ಬಜಾಜ್ ಆಟೋ ಚೇತಕ್ ಬ್ಲೂ 3202 ಎಕ್ಸ್ ಶೋ ರೂಂ ಬೆಲೆ 1.15 ಲಕ್ಷ ರೂಪಾಯಿ. ಚೇತಕ್ ಬ್ಲೂ 3202 ಬೆಲೆಯು ಅದರ ಅರ್ಬೇನ್ ರೂಪಾಂತರಕ್ಕಿಂತ 8 ಸಾವಿರ ರೂಪಾಯಿ ಕಡಿಮೆಯಾಗಿದೆ. ಆದರೆ ಇದರ ಪ್ರೀಮಿಯಂ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 1.48 ಲಕ್ಷ ರೂಪಾಯಿ ಇದೆ.
ಇತರ ಸ್ಕೂಟರ್‌ಗಳಂತೆ ಈ ಬಜಾಜ್ ಸ್ಕೂಟರ್‌ನಲ್ಲಿಯೂ ಟೆಕ್‌ಪ್ಯಾಕ್ ಅನ್ನು ಹೆಚ್ಚುವರಿ ವೆಚ್ಚದಲ್ಲಿ ನೀಡಲಾಗುತ್ತಿದೆ. ಸ್ಕೂಟರ್ ಜೊತೆಗೆ ಅದನ್ನೂ ಖರೀದಿಸಿದರೆ ಇನ್ನಷ್ಟು ಫೀಚರ್‌ಗಳು ಲಭ್ಯವಾಗುತ್ತವೆ. ಹೊಸ ಚೇತಕ್ ಬ್ಲೂ 3202 ಹಾರ್ಸ್‌ಶೂ-ಆಕಾರದ LED DRL ಜೊತೆಗೆ ಅಧಿಕೃತ ಸ್ಪೋರ್ಟಿಂಗ್ LED ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕನೆಕ್ಷನ್ ಫೀಚರ್‌ಗಳೂ ಇವೆ. ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಇವಿಯಲ್ಲಿ ಸೇರಿಸಲಾಗಿದೆ. ಈ ಚೇತಕ್ ಸ್ಕೂಟರ್‌ನ ಶ್ರೇಣಿಯನ್ನು ಹೆಚ್ಚಿಸಲು ಸ್ಪೋರ್ಟ್ ಮತ್ತು ಕ್ರಾಲ್ ಮೋಡ್‌ಗಳ ಜೊತೆಗೆ ಇಕೋ ಮೋಡ್ ಅನ್ನು ಸಹ ಅಳವಡಿಸಲಾಗಿದೆ.
ಬಜಾಜ್ ಚೇತಕ್ ಬ್ಲೂ 3202 ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡಬಲ್ಲದು. Ather Rizzta, Ola S1 Air ಮತ್ತು TVS iQube ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಇದು ಪ್ರತಿಸ್ಪರ್ಧಿಯಾಗಿದೆ. ಚೇತಕ್ ಇವಿ ಕೊಳ್ಳಲು ಬಯಸುವವರು ಕೇವಲ 2000 ರೂಪಾಯಿಗಳ ಟೋಕನ್ ಮೊತ್ತದೊಂದಿಗೆ ಬುಕ್ ಮಾಡಬಹುದು. ಈ ಸ್ಕೂಟರ್ ನಾಲ್ಕು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ – ಬ್ರೂಕ್ಲಿನ್ ಬ್ಲಾಕ್, ಸೈಬರ್ ವೈಟ್, ಇಂಡಿಗೊ ಮೆಟಾಲಿಕ್ ಮತ್ತು ಮ್ಯಾಟ್ ಕೋರ್ಸ್ ಗ್ರೇ.