alex Certify ಭಾರತದ ಟಾಪ್ 20 ಸ್ಟಾರ್ಟಪ್ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್;‌ ಇಲ್ಲಿದೆ ಕಂಪ್ಲೀಟ್‌ ಲಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಟಾಪ್ 20 ಸ್ಟಾರ್ಟಪ್ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್;‌ ಇಲ್ಲಿದೆ ಕಂಪ್ಲೀಟ್‌ ಲಿಸ್ಟ್

ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾಗಿರುವ ಲಿಂಕ್ಡ್ ಇನ್ ಇಂದು 2023 ನೇ ಸಾಲಿನ ಟಾಪ್ 20 ಭಾರತೀಯ ಸ್ಟಾರ್ಟ್ ಅಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅನನ್ಯವಾದ ಲಿಂಕ್ಡ್ ಇನ್ ಡೇಟಾವನ್ನು ಆಧರಿಸಿ ಜಾಗತಿಕವಾಗಿ ವೃತ್ತಿಪರರು ಕೆಲಸ ಮಾಡಲು ಬಯಸುವ ಉದಯೋನ್ಮುಖ ಕಂಪನಿಗಳ ವಾರ್ಷಿಕ ಶ್ರೇಯಾಂಕ ಇದಾಗಿದೆ. ‌

ಈ ಟಾಪ್ ಸ್ಟಾರ್ಟಪ್ ಗಳ ಪಟ್ಟಿಯು ವೃತ್ತಿಪರರಿಗೆ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ಉದಯೋನ್ಮುಖ ಕಂಪನಿಗಳನ್ನು ಅನ್ವೇಷಣೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇಅವರ ಮುಂದಿನ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವರು ತಿಳಿದುಕೊಳ್ಳಬೇಕಾದ ಮಾಹಿತಿಗಳೊಂದಿಗೆ ಅವರನ್ನು ಸಜ್ಜುಗೊಳಿಸುತ್ತದೆ.

 ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಲಿಂಕ್ಡ್ ಇನ್ ನಲ್ಲಿ 950+ ಮಿಲಿಯನ್ ಸದಸ್ಯರು ತೆಗೆದುಕೊಂಡಿರುವ ಬಿಲಿಯನ್ ಕ್ರಮಗಳ ಆಧಾರದ ಮೇಲೆ ವಿಶಿಷ್ಟವಾದ ಲಿಂಕ್ಡ್ ಇನ್ ಡೇಟಾದಿಂದ ಈ ಟಾಪ್ ಸ್ಟಾರ್ಟಪ್ ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ: ಅಂದರೆಉದ್ಯೋಗಿ ಬೆಳವಣಿಗೆಉದ್ಯೋಗಾಕಾಂಕ್ಷಿ ಆಸಕ್ತಿಕಂಪನಿ ಮತ್ತು ಅದರ ಉದ್ಯೋಗಿಗಳಲ್ಲಿನ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಗಮನಿಸಿ ಲಿಂಕ್ಡ್ ಇನ್ ಟಾಪ್ ಕಂಪನಿಗಳ ಪಟ್ಟಿಯಿಂದ ಪ್ರತಿಭಾನ್ವಿತ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

 ಈ ವರ್ಷದ ಟಾಪ್ ಸ್ಟಾರ್ಟಪ್ ಪಟ್ಟಿಯಲ್ಲಿ ಝೆಪ್ಟೋ ಮೊದಲ ಸ್ಥಾನದಲ್ಲಿದೆ. 2021 ರಲ್ಲಿ ಆರಂಭವಾದ ಗ್ರಾಹಕರ ಮನೆ ಬಾಗಿಲಿಗೆ ದಿನಸಿಯನ್ನು ತಲುಪಿಸುವ ಇ-ಕಾಮರ್ಸ್ ಆ್ಯಪ್ ಆಗಿರುವ ಈ ಕಂಪನಿ 2022 ರಲ್ಲಿ 4 ನೇ ಸ್ಥಾನದಲ್ಲಿತ್ತು. ಝೆಪ್ಟೋದ ಮೆರಿಟೋಕ್ರಾಟಿಕ್ ಬೆಳವಣಿಗೆಯ ಹಾದಿಯು ಅಸಾಧಾರಣವಾದ ರೀತಿಯಲ್ಲಿತ್ತು. ಆಗಸ್ಟ್ ನಲ್ಲಷ್ಟೇ ಕಂಪನಿಯು ಯೂನಿಕಾರ್ನ್ ಸ್ಥಾನಮಾನವನ್ನು ಪಡೆದಿದ್ದು2023 ರಲ್ಲಿ 200 ಮಿಲಿಯನ್ ಡಾಲರ್ ಧನಸಹಾಯವನ್ನು ಪಡೆದ ಮೊದಲ ಭಾರತೀಯ ಕಂಪನಿ ಎನಿಸಿದೆ. ಈ ಮೂಲಕ ಈ ಸಾಧನೆ ದೇಶದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಅಸಾಧಾರಣವಾದ ಸಾಮರ್ಥ್ಯ ಮತ್ತು ನಾವೀನ್ಯತೆಯ ಸಂಕೇತವಾಗಿದೆ. ಇದರೊಂದಿಗೆ ಝೆಪ್ಟೋ 2023 ರಲ್ಲಿ ಲಿಂಕ್ಡ್ ಇನ್ ಟಾಪ್ ಕಂಪನಿ ಎನಿಸಿದೆ.

 ಭಾರತದ ಮೊದಲ ಎಲೆಕ್ಟ್ರಿಕ್ ರೈಡ್-ಶೇರಿಂಗ್ ಕಂಪನಿಯಾಗಿರುವ ಬ್ಲೂಸ್ಮಾರ್ಟ್ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಂಪನಿ ಆರಂಭವಾದ ಮೂರು ವರ್ಷಗಳಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದುಕೊಂಡಿದೆ. ಮತ್ತೊಂದು ಇವಿ ಸ್ಟಾರ್ಟಪ್ ಎಕ್ಸ್ ಪೋನೆಂಟ್ ಎನರ್ಜಿ 15 ನೇ ಸ್ಥಾನ ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಸರ್ಕಾರದ `ಮೇಕ್ ಇನ್ ಇಂಡಿಯಾ’ದ ಉಪಕ್ರಮದ ಹಿನ್ನೆಲೆಯಲ್ಲಿ ಭಾರತದಲ್ಲಿ ಇವಿ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಸರ್ಕಾರದ ಬೆಂಬಲವನ್ನು ಪಡೆಯುವ ಮೂಲಕ ಅನೇಕ ಇವಿ ಸ್ಟಾರ್ಟಪ್ ಗಳು ಹುಟ್ಟಿಕೊಳ್ಳುತ್ತಿವೆ.

 ಫಿನ್ಟೆಕ್ ಭಾರತದ ಟಾಪ್ ಸ್ಟಾರ್ಟಪ್ ಪಟ್ಟಿ 2023 ರಲ್ಲಿ ಮೇಲುಗೈ ಮುಂದುವರಿಸಿದೆ. ನಾಲ್ಕು ಸ್ಟಾರ್ಟಪ್ ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಅವುಗಳೆಂದರೆಡಿಟ್ಟೋ ಇನ್ಸೂರೆನ್ಸ್ 3 ನೇ ಸ್ಥಾನ, ಎಫ್ ಐ – 7 ನೇ ಸ್ಥಾನಜಾರ್- 11 ನೇ ಸ್ಥಾನ ಮತ್ತು ಸ್ಟಾಕ್ ಗ್ರೋ – 14 ನೇ ಸ್ಥಾನದಲ್ಲಿವೆ. ಇದು ಕ್ಷೇತ್ರದ ಸ್ಥಿತಿಸ್ಥಾಪಕತಯ್ವವನ್ನು ಪ್ರತಿಬಿಂಬಿಸುತ್ತದೆ ಮತ್ತು ಸವಾಲಿನ ಮಾರುಕಟ್ಟೆ ಇದ್ದಾಗ್ಯೂ ಹೂಡಿಕೆದಾರರ ಹೂಡಿಕೆಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

 ಈ ವರ್ಷದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಪ್ರಮುಖ ಉದ್ಯಮವೆಂದರೆ ಎಜುಟೆಕ್. ಗ್ರೋಥ್ ಸ್ಕೂಲ್- 10 ನೇ ಸ್ಥಾನಟೀಚ್ ನೂಕ್ –13 ನೇ ಸ್ಥಾನ ಮತ್ತು ಆಕ್ಸಿಯೋಜಾಬ್- 17 ನೇ ಸ್ಥಾನದಲ್ಲಿವೆ. ವೃತ್ತಿಪರರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಎಐ ಸೇರಿದಂತೆ ತಂತ್ರಜ್ಞಾನಗಳಲ್ಲಿ ಕ್ಷಿಪ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಂಬಂಧ ಉಂಟಾಗುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಎಜುಟೆಕ್ ಕಂಪನಿಗಳು ಸಕ್ರಿಯವಾಗಿವೆ.

ಈ ಪಟ್ಟಿಯ ಬಗ್ಗೆ ಮಾತನಾಡಿದ ಲಿಂಕ್ಡ್ ಇನ್ ಇಂಡಿಯಾದ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ನಿರಾಜಿತ ಬ್ಯಾನರ್ಜಿ, “ಈ ವರ್ಷದ 20 ಸ್ಟಾರ್ಟಪ್ ಗಳಲ್ಲಿ 14 ಹೊಸ ಸ್ಟಾರ್ಟಪ್ ಗಳು ಸೇರ್ಪಡೆಯಾಗಿರುವುದು ವಿಶೇಷವಾಗಿದೆ. ಭಾರತದ ಸ್ಟಾರ್ಟಪ್ ಕ್ಷೇತ್ರದಲ್ಲಿ ನಾವೀನ್ಯತೆಯ ಅಗಾಧವಾದ ಸಾಮರ್ಥ್ಯ ಮತ್ತು ಬೆರಗುಗೊಳಿಸುವ ವೇಗವನ್ನು ಇದು ಒತ್ತಿ ಹೇಳುತ್ತದೆ. ಈ ಪಟ್ಟಿಯು ಉದ್ಯಮವನ್ನು ಮತ್ತಷ್ಟು ಪ್ರಕಾಶಮಾನವಾಗಿ ಬೆಳವಣಿಗೆ ಹೊಂದುತ್ತಿರುವ ಹೊಸ ಕಂಪನಿಗಳಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ವೃತ್ತಿಪರರಿಗೆ ಅನನ್ಯವಾದ ಮತ್ತು ಕಾರ್ಯಸಾಧ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ, ಅಲ್ಲಿ ಅತ್ಯುತ್ಕೃಷ್ಠವಾದ ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಲು ಅವಕಾಶ ಲಭ್ಯವಾಗಲಿದೆ. ಈ ಸ್ಟಾರ್ಟಪ್ ಗಳು ಇದೀಗ ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲು ಮುಂದೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ನವೋಲ್ಲಾಸದ ನವೋದ್ಯಮ ಅಂದರೆ ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಬೆಳವಣಿಗೆಯ ಯಶೋಗಾಥೆಯ ಭಾಗವಾಗಲು ಇದೊಂದು ಉತ್ತಮ ಅವಕಾಶವಾಗಿದೆ’’ ಎಂದರು.

1. ZEPTO

2. BluSmart

3. Ditto Insurance

4. Pocket FM

5. Skyroot Aerospace

6. GoKwik

7. Fi

8. Sprinto

9. Supersourcing

10. GrowthSchool

11. Jar

12. Shyft

13. Teachnook

14. StockGro

15. Exponent Energy

16. Housr

17. AccioJob

18. TravClan

19. DotPe

20. Fasal

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...