ಆಕರ್ಷಕವಾಗಿ ಕಾಣಲು ಪ್ರತಿಯೊಬ್ಬರೂ ಬಯಸ್ತಾರೆ. ಮುಖದಿಂದ ಹಿಡಿದು ಕೈಕಾಲಿನ ಸೌಂದರ್ಯ ವೃದ್ಧಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಆದ್ರೆ ಮನೆಯಲ್ಲಿಯೇ ಕೆಲ ಮನೆ ಮದ್ದಿನ ಮೂಲಕ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಇದ್ರಿಂದ ಯಾವುದೇ ಅಡ್ಡಪರಿಣಾಮವಿರುವುದಿಲ್ಲ. ಕುತ್ತಿಗೆ ಕೆಲವರಿಗೆ ಕಪ್ಪಾಗಿರುತ್ತದೆ. ಇದು ನೋಡಲು ಅಸಹ್ಯವೆನಿಸುತ್ತದೆ. ಕೆಲವೊಮ್ಮೆ ಎಷ್ಟು ಕ್ಲೀನ್ ಮಾಡಿದ್ರೂ ಇದು ಹೋಗುವುದಿಲ್ಲ. ಅಂತವರು ಕೆಲ ಮನೆ ಮದ್ದಿನ ಮೂಲಕ ಕುತ್ತಿಗೆ ಸೌಂದರ್ಯ ವೃದ್ಧಿಸಿಕೊಳ್ಳಬಹುದು.
ಒಂದು ಪಾತ್ರೆಯಲ್ಲಿ ಒಂದು ಚಮಚ ಗೋಧಿ ಹಿಟ್ಟು, ಒಂದು ಟೀ ಚಮಚ ಹಾಲು ಮತ್ತು ಒಂದು ಚಿಟಿಕೆ ಅರಿಶಿನವನ್ನು ಸರಿಯಾಗಿ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಕುತ್ತಿಗೆಗೆ ಹಚ್ಚಿ. ಮಿಶ್ರಣ ಒಣಗಿದ ನಂತ್ರ ಸ್ವಚ್ಛ ನೀರಿನಲ್ಲಿ ಕ್ಲೀನ್ ಮಾಡಿ. ಒಂದು ವಾರಗಳ ಕಾಲ ಇದನ್ನು ಮಾಡುತ್ತ ಬಂದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.
ಪಪ್ಪಾಯಿ ಕಾಯಿಯ ತುಂಡುಗಳನ್ನು ಮಿಕ್ಸಿ ಮಾಡಿ ರಸ ತೆಗೆದುಕೊಳ್ಳಿ. ಅದಕ್ಕೆ ರೋಸ್ ವಾಟರ್ ಮತ್ತು ಸ್ವಲ್ಪ ಮೊಸರು ಸೇರಿಸಿ. ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ಉಜ್ಜಿ ತೊಳೆಯಿರಿ. ಕೆಲವೇ ದಿನಗಳಲ್ಲಿ ಪರಿಣಾಮ ಕಾಣಿಸುತ್ತದೆ.
ಒಂದು ಬಟ್ಟಲಿಗೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿ. 10 ನಿಮಿಷಗಳ ನಂತರ ತೊಳೆಯಿರಿ.