ಭಾರತೀಯರು ಯಾವುದೇ ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳಿಲ್ಲದೆ ಕಾರ್ಯಕ್ರಮ ಮುಗಿಸುವುದಿಲ್ಲ. ಸಿಹಿ ತಿಂಡಿಗಳು ಎಲ್ಲರಿಗೂ ಅಷ್ಟು ಪ್ರಿಯವಾಗಿದದ್ದು. ಆದರೆ ಇದನ್ನು ಹಲವು ದಿನಗಳ ಕಾಲ ಇಟ್ಟರೆ ಅವು ಬೇಗನೆ ಹಾಳಾಗುತ್ತವೆ. ಹಾಗಾಗಿ ಸಿಹಿತಿಂಡಿಗಳನ್ನು ದೀರ್ಘಕಾಲದವರೆಗೆ ಇಡಲು ಈ ಸಲಹೆ ಪಾಲಿಸಿ.
ಲಡ್ಡು ಮುಂತಾದ ಸಿಹಿತಿಂಡಿಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದರೆ ಅದನ್ನು ಗಾಳಿಯಾಡದ ಡಬ್ಬದಲ್ಲಿ ಇಡುವುದು ಉತ್ತಮ. ಸಿಹಿ ತಿಂಡಿಗಳನ್ನು ಗಾಳಿಗೆ ಒಡ್ಡಿದರೆ ಅವು ಬೇಗ ಹಾಳಾಗುತ್ತವೆ.
ಸಿಹಿತಿಂಡಿಗಳನ್ನು ಯಾವಾಗಲೂ ತಂಪಾದ ಸ್ಥಳಗಳಲ್ಲಿ ಇಡಬೇಕು. ಅವುಗಳನ್ನು ಬೆಚ್ಚಗಿರುವ ಸ್ಥಳದಲ್ಲಿ ಇಟ್ಟರೆ ಅವು ಬೇಗನೆ ಹಾಳಾಗುತ್ತದೆ. ಹಾಗಾಗಿ ಸಿಹಿ ತಿಂಡಿಗಳನ್ನು ಫ್ರಿಜ್ ನಲ್ಲಿಡಿ, ಅಡುಗೆ ಮನೆಯಲ್ಲಿ ಸ್ಟೋರ್ ಮಾಡಿ ಇಡಬೇಡಿ.
ಸಿಹಿತಿಂಡಿಗಳನ್ನು ತೇವಾಂಶದಿಂದ ದೂರವಿಡಬೇಕು. ಹಾಗಾಗಿ ಒದ್ದೆಯಾದ ಕೈಗಳಿಂದ ಅವುಗಳನ್ನು ಮುಟ್ಟಬೇಡಿ. ಅವುಗಳನ್ನು ನೀರಿನಿಂದ ದೂರವಿಡಿ. ಸೂರ್ಯ ಬೆಳಕು ಬೀಳದಂತೆ ನೋಡಿಕೊಳ್ಳಿ. ಹಾಗೇ ಅವುಗಳನ್ನು ಪ್ಲಾಸ್ಟಿಕ್ ಡಬ್ಬಗಳ ಬದಲು ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ.