ಅಡುಗೆ ಮಾಡುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮೊಟ್ಟೆ ಮತ್ತು ಮಾಂಸದ ಅಡುಗೆ ಮಾಡುವಾಗ ಇದರ ವಾಸನೆ ಆ ಪಾತ್ರೆಯಿಂದ ಬರುತ್ತಿರುತ್ತದೆ. ಎಷ್ಟೇ ತಿಕ್ಕಿ ತೊಳೆದರೂ ಈ ವಾಸನೆ ಹೋಗುವುದಿಲ್ಲ. ಈ ವಾಸನೆಯನ್ನು ಸುಲಭವಾಗಿ ನಿವಾರಿಸಲು ಸಾಧ್ಯವಿಲ್ಲ. ಹಾಗಾಗಿ ಈ ಟಿಪ್ಸ್ ಫಾಲೋ ಮಾಡಿ.
*ಮೊಟ್ಟೆ, ಮಾಂಸವನ್ನು ಬೇಯಿಸಿದ ಬಳಿಕ ವಾಸನೆಯನ್ನು ನಿವಾರಿಸಲು ಪಾತ್ರೆಯನ್ನು ಬಿಸಿ ನೀರಿನಿಂದ ತೊಳೆಯಿರಿ. ಇದು ವಾಸನೆಯನ್ನು ಬಹಳ ಬೇಗ ತೊಲಗಿಸುತ್ತದೆ.
*ಮಾಂಸದ ವಾಸನೆಯನ್ನು ನಿವಾರಿಸಲು ಪುದೀನಾ, ನಿಂಬೆ ಮತ್ತು ಶುಂಠಿಯಂತಹ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುವ ಡಿಶ್ ವಾಶ್ ಬಳಸಿ ಪಾತ್ರೆ ತೊಳೆಯಿರಿ. ಇಲ್ಲದಿದ್ದರೆ ನಿಂಬೆ ಸಿಪ್ಪೆಯಿಂದ ಪಾತ್ರೆಯನ್ನು ತಿಕ್ಕಿ ತೊಳೆದರೂ ವಾಸನೆ ಕಡಿಮೆಯಾಗುತ್ತದೆ.
ಹಾಗೇ ಮಾಂಸವನ್ನು ತುಂಬಾ ಹೊತ್ತು ಪಾತ್ರೆಯಲ್ಲಿ ಇಡಬಾರದು. ಹಾಗೂ ಮಾಂಸ ತೆಗೆದ ತಕ್ಷಣ ಪಾತ್ರೆಗಳನ್ನು ವಾಶ್ ಮಾಡಬೇಕು. ತುಂಬಾ ಹೊತ್ತು ಇಟ್ಟರೆ ವಾಸನೆ ಬರುತ್ತದೆ.