ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬಟ್ಟೆಯ ಮೇಲೆ ಎಣ್ಣೆಯ ಜಿಡ್ಡು ಅಂಟಿಕೊಳ್ಳುವುದು, ಕಲೆಯಾಗುವುದು ಆಗುತ್ತಿರುತ್ತದೆ. ಇದು ವಾಶ್ ಮಾಡಿದರೆ ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಈ ಎಣ್ಣೆ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ನ್ನು ಫಾಲೋ ಮಾಡಿ.
*ಅಡುಗೆ ಸೋಡಾ ಯಾವುದೇ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಎಣ್ಣೆ ಕಲೆ ಇರುವ ಕಡೆ ಅಡುಗೆ ಸೋಡಾದ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಬ್ರಶ್ ನಿಂದ ಉಜ್ಜಿ ವಾಶ್ ಮಾಡಿ.
*ಆಲ್ಕೋಹಾಲ್ ಎಣ್ಣೆ ಕಲೆಗಳನ್ನು ತೆಗೆಯಲು ಸಹಕಾರಿ. ಇದು ಬಟ್ಟೆಯ ಬಣ್ಣಗಳಿಗೆ ಹಾನಿ ಮಾಡದೇ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ 4 ಹನಿ ಆಲ್ಕೋಹಾಲ್ ನ್ನು ಕಲೆ ಇರುವ ಕಡೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಉಜ್ಜಿ ತೊಳೆದರೆ ಕಲೆ ಹೋಗುತ್ತದೆ.
*ಹಾಗೇ ಹೈಡ್ರೋಜನ್ ಪೆರಾಕ್ಸೈಡ್ ಕೂಡ ಕಲೆ ನಿವಾರಿಸಲು ಸಹಾಯಕಾರಿಯಾಗಿದೆ. ಹೈಡ್ರೋಜನ್ ಪೆರಾಕ್ಸೈಡ್ ಗೆ ನಿಂಬೆ ರಸ ಮಿಕ್ಸ್ ಮಾಡಿ ಕಲೆ ಇರುವ ಕಡೆ ಹಚ್ಚಿ ತೊಳೆದರೆ ಎಣ್ಣೆ ಜಿಡ್ಡಿನ ಕಲೆಗಳೆಲ್ಲಾ ನಿವಾರಣೆಯಾಗುತ್ತವೆ.