ದೇಹ ತೂಕ ಕಡಿಮೆ ಮಾಡಲೆಂದು ನೀವು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುವ ಮುನ್ನ ಈ ಕೆಳಗಿನ ಕೆಲವು ಸಂಗತಿಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ.
ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸ ನಿಮಗಿದ್ದರೆ ಅದನ್ನು ಬಿಟ್ಟು ಬಿಡಿ. ದಿನಕ್ಕೆ 7-8 ಗಂಟೆ ಹೊತ್ತು ನಿದ್ದೆ ಅಗತ್ಯ. ಅದಕ್ಕಿಂತ ಹೆಚ್ಚು ಹೊತ್ತು ಮಲಗಿದರೆ ಬೆಳಗಿನ ತಿಂಡಿ ತಿನ್ನುವುದು ಮತ್ತಷ್ಟು ತಡವಾಗುತ್ತದೆ. ಇದು ಜೀರ್ಣಕ್ರಿಯೆ ಮೇಲೆ ನೇರ ಪರಿಣಾಮ ಬೀರುತ್ತದೆ.
ಬೆಳಿಗ್ಗೆ ನೀರು ಕುಡಿಯದೇ ಇರುವುದರಿಂದ ನೀವು ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎದ್ದಾಕ್ಷಣ ಬೆಳಗ್ಗಿನ ತಿಂಡಿಗೂ ಮುನ್ನ ಕನಿಷ್ಠ 4-6 ಲೋಟ ನೀರು ಕುಡಿಯಿರಿ.
ಬೆಳಗಿನ ಉಪಾಹಾರವನ್ನು ಸ್ಕಿಪ್ ಮಾಡದಿರಿ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೇ ಹೊರತು ದೇಹ ತೂಕ ಕಡಿಮೆ ಆಗುವುದಿಲ್ಲ. ತಿನ್ನುವಾಗ ಟಿವಿ ನೋಡುವ ಅಭ್ಯಾಸ ಕೈಬಿಡಿ. ಮನಸ್ಸಿಟ್ಟು, ತಿನ್ನುವ ವಸ್ತುಗಳನ್ನು ನೋಡುತ್ತಾ ರುಚಿ ಸವಿಯುತ್ತಾ ತಿನ್ನಿ.