ಕೊರೊನಾ ವೈರಸ್‌ನಂತಹ ಮಾರಕ ಸೋಂಕನ್ನು ಇಡೀ ಜಗತ್ತಿಗೇ ಹರಡಿದ್ದ ಚೀನಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕೋವಿಡ್ ಸೋಂಕು ಪ್ರಪಂಚದಾದ್ಯಂತ ವಿನಾಶವನ್ನೇ ತಂದಿಟ್ಟಿತ್ತು. ಈಗ ಚೀನಾದಲ್ಲಿ ಮತ್ತೊಂದು ಅಪಾಯಕಾರಿ ಸೋಂಕು ಎಗ್ಗಿಲ್ಲದೇ ಹರಡುತ್ತಿದೆ. ಮಕ್ಕಳಲ್ಲಿ ಉಸಿರಾಟದ ಕಾಯಿಲೆ ಕಾಣಿಸಿಕೊಂಡಿದೆ. ನ್ಯುಮೋನಿಯಾವನ್ನೇ ಹೋಲುವ ಈ ಕಾಯಿಲೆಯಿಂದ ಚೀನಾದಲ್ಲಿ ಲಕ್ಷಾಂತರ ಜನರು ಆಸ್ಪತ್ರೆ ಪಾಲಾಗಿದ್ದಾರೆ.
ಈ ರೋಗ ಶೀಘ್ರದಲ್ಲೇ ಭಾರತಕ್ಕೂ ವಕ್ಕರಿಸಿದರೆ ಅಚ್ಚರಿಯೇನಿಲ್ಲ. ಹಾಗಾಗಿ ಈ ಅಪಾಯವನ್ನು ಹೇಗೆ ತಪ್ಪಿಸಬಹುದು ಅನ್ನೋದನ್ನು ತಜ್ಞರೇ ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ ಪ್ರಮುಖವಾಗಿ ಈ ವೈರಸ್‌ನಿಂದ ಮಕ್ಕಳನ್ನು ರಕ್ಷಿಸಬೇಕಾದರೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಈ ರೋಗವು ಉಸಿರಾಟದ ಮೂಲಕ ಹರಡುವುದರಿಂದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಅನುಸರಿಸುವುದು ಮತ್ತು ಕ್ವಾರಂಟೈನ್‌ನಲ್ಲಿ ಉಳಿಯುವುದು ಕಡ್ಡಾಯ. ಇನ್‌ಫ್ಲೂಯೆಂಜಾ, ಆರ್‌ಎಚ್‌ವಿ ವೈರಸ್ ಮತ್ತು ಕೋವಿಡ್ ಲಸಿಕೆಗಳು ಈ ರೋಗವನ್ನು ತಡೆಗಟ್ಟುವ ಸಾಧನವಾಗಿರಬಹುದು, ಆದರೆ ವೈದ್ಯರನ್ನು ಸಂಪರ್ಕಿಸಿದ ನಂತರವೇ ಅದನ್ನು ತೆಗೆದುಕೊಳ್ಳಬೇಕು.
ಸ್ಥಳೀಯ ಆಡಳಿತ ಮತ್ತು ಸಮುದಾಯದ ಜನರು ಸೇರಿದಂತೆ ಕೇಂದ್ರ – ರಾಜ್ಯ ಸರ್ಕಾರಗಳು ಒಟ್ಟಾಗಿ ಈ ರೋಗವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಜನರು ಇದರಿಂದ ಪಾರಾಗಲು ಸಾಧ್ಯ.
ವೈದ್ಯರ ಸಲಹೆಯ ಮೇರೆಗೆ ಎಂಟಿವೈರಲ್ ಔಷಧಿಗಳನ್ನು ತೆಗೆದುಕೊಳ್ಳಬಹುದು, ಇವುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಇವುಗಳ ಮೂಲಕ ರೋಗದ ಅವಧಿಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಈ ರೋಗದ ಕ್ಷಣ ಕ್ಷಣದ ಅಪ್ಡೇಟ್‌ಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ (WHO) ಸೂಚನೆಗಳನ್ನು ಗಮನಿಸಬೇಕು ಮತ್ತು ಅದನ್ನು ಅನುಸರಿಸಬೇಕು.