alex Certify ಡಬ್ಬದಲ್ಲಿಟ್ಟ ಬೇಳೆ ಕಾಳುಗಳಲ್ಲಿ ಹುಳ, ಕೀಟಗಳಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಬ್ಬದಲ್ಲಿಟ್ಟ ಬೇಳೆ ಕಾಳುಗಳಲ್ಲಿ ಹುಳ, ಕೀಟಗಳಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್‌

ಬಹುತೇಕ ಜನರು ತಿಂಗಳಿಗೊಮ್ಮೆ ದಿನಸಿ ಖರೀದಿ ಮಾಡುತ್ತಾರೆ. ಒಂದು ತಿಂಗಳಿಗೆ ಬೇಕಾಗುವಷ್ಟು ದವಸ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ. ಅನೇಕ ಬಾರಿ ಡಬ್ಬದಲ್ಲಿ ಸಂಗ್ರಹಿಸಿಟ್ಟ ಬೇಳೆಕಾಳುಗಳಲ್ಲಿ ಹುಳಗಳು ಕಾಣಿಸಿಕೊಳ್ಳುತ್ತವೆ. ತಣ್ಣಗಿನ ವಾತಾವರಣದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚು. ಈ ರೀತಿ ಧಾನ್ಯಗಳು, ಅಕ್ಕಿ ಮತ್ತು ಬೇಳೆಕಾಳುಗಳಲ್ಲಿ ಕೀಟಗಳಾಗದಂತೆ ತಡೆಯಲು ಕೆಲವೊಂದು ಸುಲಭದ ಪರಿಹಾರಗಳಿವೆ.

ಲವಂಗ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಬೇಳೆಕಾಳುಗಳ ಡಬ್ಬದಲ್ಲಿ ಒಂದೆರಡು ಲವಂಗವನ್ನು ಹಾಕಿಡಿ. ಹೀಗೆ ಮಾಡುವುದರಿಂದ ಧಾನ್ಯಗಳಲ್ಲಿ ಕೀಟಗಳು ಕಾಣಿಸಿಕೊಳ್ಳುವುದಿಲ್ಲ. ಅವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು.

ಡಬ್ಬದಲ್ಲಿ ಬೇಳೆಕಾಳುಗಳನ್ನು ಹಾಕಿಡುವ ಮೊದಲು ಅದನ್ನು ಚೆನ್ನಾಗಿ ಒಣಗಿಸಬೇಕು. ನೀರಿನಂಶವನ್ನು ಸಂಪೂರ್ಣ ಆರಿಸುವುದರಿಂದ ಅವುಗಳಲ್ಲಿ ಹುಳಗಳು ಕಾಣಿಸಿಕೊಳ್ಳುವುದಿಲ್ಲ.ಇದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಾಕುವುದರಿಂದ ಕೀಟಗಳು ಬರುವುದಿಲ್ಲ.ಅಷ್ಟೇ ಅಲ್ಲ ಧಾನ್ಯಗಳ ಡಬ್ಬದಲ್ಲಿ ಸ್ವಲ್ಪ ಸಾಸಿವೆ ಎಣ್ಣೆ ಹಾಕಿಡುವುದರಿಂದ ಕೀಟಗಳನ್ನು ನಿವಾರಿಸಬಹುದು.

ನಾವು ಒಗ್ಗರಣೆಗೆ ಬಳಸುವ ಕರಿಬೇವಿನ ಸೊಪ್ಪನ್ನು ಚೆನ್ನಾಗಿ ಒಣಗಿಸಿ. ಅವುಗಳನ್ನು ಬೇಳೆಕಾಳುಗಳ ಡಬ್ಬದಲ್ಲಿ ಹಾಕಿಡಬೇಕು. ಹೀಗೆ ಮಾಡುವುದರಿಂದ ಬೇಳೆಕಾಳುಗಳು ಕೀಟಗಳ ಸೋಂಕಿಗೆ ಒಳಗಾಗುವುದಿಲ್ಲ. ತೇವಾಂಶದ ಕಾರಣದಿಂದಾಗಿ ಕೀಟಗಳು ಹೆಚ್ಚಾಗಿ ಧಾನ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಕಹಿಬೇವಿನ ಎಲೆಗಳು ಕೂಡ ಕೀಟಗಳಿಂದ ಮುಕ್ತಿ ಪಡೆಯಲು ನೆರವಾಗುತ್ತವೆ. ಬೇಳೆಕಾಳುಗಳಲ್ಲಿ ಚೆನ್ನಾಗಿ ಒಣಗಿಸಿದ ನಾಲ್ಕಾರು ಕಹಿಬೇವಿನ ಎಲೆಗಳನ್ನು ಹಾಕಿ ಅದನ್ನು ಏರ್‌ ಟೈಟ್‌ ಡಬ್ಬದಲ್ಲಿಡಿ. ಹೀಗೆ ಮಾಡುವುದರಿಂದ ತಿಂಗಳುಗಟ್ಟಲೆ ಇಟ್ಟರೂ ಬೇಳೆಕಾಳುಗಳು ಕೆಡುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...