ಬಾಳೆಹಣ್ಣು ಬಹುಬೇಗ ಕಪ್ಪಾಗುವುದನ್ನು ನೀವು ಗಮನಿಸಿರಬಹುದು. ಅದು ನಿಧಾನವಾಗಿ ಹಣ್ಣಾಗುವಂತೆ ಮಾಡಲು ಮತ್ತು ಬೇಗ ಹಾಳಾಗದಂತೆ ಉಳಿಯಲು ಏನು ಮಾಡಬಹುದು ಗೊತ್ತೇ?
ಬಾಳೆಹಣ್ಣಿನ ಗೊನೆಯನ್ನು ನೇತು ಹಾಕಿ. ಹಗ್ಗ ಅಥವಾ ಹ್ಯಾಂಗರ್ ನಲ್ಲಿ ಅವುಗಳನ್ನು ಇಡುವುದರಿಂದ ನಿಧಾನವಾಗಿ ಹಣ್ಣಾಗುತ್ತವೆ. ಹೆಚ್ಚು ದಿನ ಉಳಿಯಬೇಕು ಎಂದಿದ್ದರೆ ಹಸಿರು ಬಾಳೆಹಣ್ಣನ್ನೇ ಖರೀದಿಸಿ. ಇವು ನಾಲ್ಕಾರು ದಿನಗಳ ತನಕ ತಾಜಾ ಆಗಿ ಉಳಿಯುತ್ತದೆ.
ಪ್ಲಾಸ್ಟಿಕ್ ಫಾಯಿಲ್ ಪೇಪರ್ ನಲ್ಲಿ ಬಾಳೆಹಣ್ಣಿನ ಕಾಂಡವನ್ನು ಕಟ್ಟಿಡಿ. ಇದರಿಂದ ಬಾಳೆ ಹಣ್ಣು ಬೇಗ ಹಣ್ಣಾಗಿ ಹಾಳಾಗುವುದಿಲ್ಲ.
ಕಪ್ಪಾದ ಬಾಳೆಹಣ್ಣನ್ನು ಎಸೆಯುವ ಬದಲು ಫ್ರಿಜ್ ನಲ್ಲಿಡಿ. ನಾಲ್ಕಾರು ದಿನಗಳ ಬಳಿಕವೂ ಇದರಿಂದ ಚಪಾತಿ ಅಥವಾ ಹಲ್ವಾ ತಯಾರಿಸಬಹುದು. ಹಾಗೆಂದು ಹಸಿರು ಬಾಳೆಹಣ್ಣನ್ನು ಫ್ರಿಜ್ ನಲ್ಲಿ ಇಡದಿರಿ. ಇದರಿಂದ ಬಾಳೆಹಣ್ಣು ರುಚಿಯನ್ನೂ ಕಳೆದುಕೊಳ್ಳುತ್ತದೆ.
ಹಾಗೆ ಒಟ್ಟಿಗೇ ತುಂಬಾ ಹಣ್ಣು ಖರೀದಿಸದೆ 4-5 ದಿನಗಳಿಗಷ್ಟೇ ಖರೀದಿಸಿ.