ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗೋದಿಲ್ಲ. ಸಿಕ್ಕಿದ್ದನ್ನು ತಿನ್ನೋದು, ಸಿಕ್ಕಾಗ ಮಲಗೋದು ಹೀಗೆ ಅಸ್ತವ್ಯಸ್ತ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಾಯಿದೆ. ಸ್ಥೂಲಕಾಯದ ಸಮಸ್ಯೆ ನಮ್ಮನ್ನು ಕಾಡ್ತಿದೆ.
ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ತೂಕ ಇಳಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ವ್ಯಾಯಾಮಕ್ಕೆ ಸಮಯ ಸಿಗೋದಿಲ್ಲ. ಏನು ಮಾಡೋದು ಅಂತಾ ಅನೇಕರು ಪ್ರಶ್ನಿಸ್ತಾರೆ. ನಿಮಗೂ ವ್ಯಾಯಾಮಕ್ಕೆ ಸಮಯ ಸಿಗ್ತಿಲ್ಲ ಎಂದಾದ್ರೆ ಚಿಂತೆ ಬೇಡ. ವ್ಯಾಯಾಮ ಮಾಡದೆ ಸರಳ ಉಪಾಯಗಳಿಂದ ತೂಕ ಇಳಿಸಿಕೊಳ್ಳಬಹುದು.
ಸರಿಯಾದ ನಿದ್ರೆ ನಮ್ಮ ಬಹುತೇಕ ಸಮಸ್ಯೆಗಳಿಗೆ ಮದ್ದು. ಮನುಷ್ಯನಿಗೆ 7-8 ಗಂಟೆ ನಿದ್ರೆಯ ಅಗತ್ಯವಿದೆ. ನಿದ್ರಾಹೀನತೆ ಬೊಜ್ಜಿಗೆ ಕಾರಣವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿದ್ರೆ ಬಿಡಬೇಡಿ.
ಸೋಡಾ ಇಲ್ಲ ಇತರೆ ಪಾನೀಯ ಸೇವನೆ ಮಾಡುವ ಹವ್ಯಾಸವಿದ್ದರೆ ಅದನ್ನು ತಕ್ಷಣ ಬಿಡಿ. ಸೋಡಾ ಬದಲು ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ. ಸೋಡಾ ಬೆರೆತ ಪಾನೀಯ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ.
ಚೂಯಿಂಗ್ ಗಮ್ ಜಗಿಯೋದನ್ನು ಬಿಟ್ಟುಬಿಡಿ. ಬಹುತೇಕರಿಗೆ ಈ ವಿಷ್ಯ ಗೊತ್ತಿಲ್ಲ. ಚೂಯಿಂಗ್ ಗಮ್ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಇದ್ರಲ್ಲಿರುವ ಸಿಹಿ ಕ್ಯಾಲೋರಿ ಹೆಚ್ಚಿಸುವ ಕೆಲಸ ಮಾಡುತ್ತದೆ.
ನಿಮ್ಮ ಹೊಟ್ಟೆ ದೊಡ್ಡದಾಗಿ ಬಂದಿದ್ದರೆ ಇಂದಿನಿಂದ ನೇರವಾಗಿ ನಿಲ್ಲುವುದನ್ನು ಅಭ್ಯಾಸ ಮಾಡಿ. ನೇರ ಭಂಗಿ ನಿಮ್ಮ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡುತ್ತದೆ. ಅನೇಕ ಸಂಶೋಧನೆಗಳಿಂದಲೂ ಇದು ಸಾಬೀತಾಗಿದೆ.
ಮಂಡಿಯ ಮೇಲೆ ಕುಳಿತು ಹೊಟ್ಟೆಯನ್ನು ಒಳಗೆ ಎಳೆದುಕೊಂಡು 30 ಸೆಕೆಂಡುಗಳ ಕಾಲ ಹಾಗೆ ಇರಿ. ದಿನದಲ್ಲಿ 5-6 ಬಾರಿ ನೀವು ಹೀಗೆ ಮಾಡಬಹುದು. ಇದು ನಿಮ್ಮ ಹೊಟ್ಟೆ ಬೊಜ್ಜು ಕರಗಲು ಸಹಾಯಕಾರಿ.