ಜಿಟಿಪಿಟಿ ಸುರಿಯುವ ಮಳೆಗೆ ಗರಿ ಗರಿಯಾದ ಪಕೋಡ ಸವಿಯುವ ಬಯಕೆ ಆಗ್ತಿದೆಯಾ…?ಆದರೆ ಹೇಗೆ ಮಾಡಿದರೂ ಪಕೋಡಾ ಗರಿ ಗರಿಯಾಗಲ್ಲ. ಎಷ್ಟೇ ಚೆನ್ನಾಗಿ ಕರಿದರೂ ಮೆತ್ತಗೆ ಆಗುತ್ತದೆ ಎಂಬ ದೂರು ಕೆಲವರದ್ದು. ಇಲ್ಲಿ ಗರಿಗರಿಯಾದ ಪಕೋಡ ಮಾಡುವುದಕ್ಕೆ ಟಿಪ್ಸ್ ಇದೆ. ಪಕೋಡಾ ಮಾಡುವಾಗ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
ಪಕೋಡ ಮಾಡುವುದಕ್ಕೆ ಬೇಕಿರುವ ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ಹಾಗೇಯೇ ಇಡಿ. ಯಾವುದೇ ಕಾರಣಕ್ಕೂ ಇದಕ್ಕೆ ನೀರು ಸೇರಿಸಬೇಡಿ. ಈರುಳ್ಳಿ ಸೇರಿಸಿರುವುದರಿಂದ ಸ್ವಲ್ಪ ಹೊತ್ತಿನಲ್ಲಿಯೇ ಇದು ನೀರು ಬಿಡುತ್ತದೆ. ಹಾಗಾಗಿ ನೀರು ಹಾಕಿದರೆ ಪಕೋಡ ಗರಿ ಗರಿಯಾಗಲ್ಲ. ನಂತರ ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಸೇರಿಸಿಕೊಳ್ಳಿ.
ಇನ್ನು ಪಕೋಡಾ ಮಿಶ್ರಣ ಕಲಸುವಾಗ 2 ಚಮಚ ಬಿಸಿ ಎಣ್ಣೆ ಯನ್ನು ಸೇರಿಸಿ ಕಲಸಿಕೊಳ್ಳಿ. ಇದರಿಂದ ಕೂಡ ಪಕೋಡಾ ಗರಿ ಗರಿಯಾಗುತ್ತದೆ.
ಒಂದು ವೇಳೆ ಪಕೋಡಾದ ಮಿಶ್ರಣ ನೀರಾಗಿದ್ದರೆ 2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಸೇರಿಸಿಕೊಳ್ಳಿ. 1 ಕಪ್ ಕಡಲೆಹಿಟ್ಟಿನ ಅಳತೆಗೆ 2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಸೇರಿಸಬೇಕು.