ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ. ನಮ್ಮ ಸುತ್ತ ಇರುವ ಜಗತ್ತು ಮತ್ತು ಬಣ್ಣಗಳನ್ನು ನೋಡಲು ಕಣ್ಣುಗಳು ಬೇಕೇಬೇಕು. ಗಂಭೀರ ಸಮಸ್ಯೆ ಬರುವವರೆಗೂ ನಾವು ಕಣ್ಣನ್ನು ನಿರ್ಲಕ್ಷಿಸುತ್ತೇವೆ. ಕಣ್ಣಿನ ಆರೋಗ್ಯ ಮತ್ತು ದೃಷ್ಟಿಶಕ್ತಿಯನ್ನು ಉಳಿಸಿಕೊಳ್ಳಲು ನಾವು ಕಾಳಜಿ ವಹಿಸಬೇಕು.
ಆರೋಗ್ಯಕರ ಡಯಟ್ ಮಾಡಿ : ಕಣ್ಣುಗಳಿಗಾಗಿ ಆರೋಗ್ಯಕರ ಪೌಷ್ಠಿಕ ಆಹಾರ ಸೇವಿಸಬೇಕು. ಸೊಪ್ಪು, ಮೊಳಕೆಕಾಳು, ನಟ್ಸ್, ಕಿತ್ತಳೆ, ನಿಂಬೆ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು.
ಧೂಮಪಾನ ಬಿಟ್ಟುಬಿಡಿ : ಆರೋಗ್ಯಕರ ಕಣ್ಣುಗಳು ನಿಮ್ಮದಾಗಬೇಕೆಂದರೆ ಧೂಮಪಾನ ತ್ಯಜಿಸಿ. ಧೂಮಪಾನದಿಂದ ನಿಮ್ಮ ಅಕ್ಷಿಪಟಲ ತೊಂದರೆಗೊಳಗಾಗುತ್ತದೆ, ಕಣ್ಣಿನ ದೃಷ್ಟಿಯ ನರಕ್ಕೂ ಅಪಾಯ ಖಚಿತ.
ಸರಿಯಾಗಿ ನಿದ್ರಿಸಿ : ನಿದ್ರೆಯ ಕೊರತೆಯಿಂದ ನಿಮ್ಮ ಕಣ್ಣುಗಳಿಗೆ ಆಯಾಸವಾಗಬಹುದು. ಇದ್ರಿಂದ ತುರಿಕೆ ಮತ್ತು ಕಣ್ಣುಗಳಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಕಣ್ಣುಗಳಿಗೆ ಅಗತ್ಯ ಪೋಷಕಾಂಶಗಳ ಜೊತೆಗೆ ಸರಿಯಾದ ನಿದ್ದೆ ಕೂಡ ಅಗತ್ಯ.
ನಿಯಮಿತವಾಗಿ ಕಣ್ಣುಗಳನ್ನು ಪರೀಕ್ಷಿಸಿ : ನಿಮ್ಮ ದೃಷ್ಟಿ ಸ್ಟ್ರಾಂಗ್ ಆಗಿರಬೇಕೆಂದ್ರೆ ಆಗಾಗ ನಿಮ್ಮ ಕಣ್ಣುಗಳನ್ನು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ಗ್ಲುಕೋಮಾ, ದೃಷ್ಟಿಹೀನತೆ, ಅಕ್ಷಿಪಟಲದ ಸಮಸ್ಯೆಯಿದ್ದರೆ ಬೇಗನೆ ಪತ್ತೆ ಮಾಡಬಹುದು. ಪ್ರತಿಯೊಬ್ಬರೂ ಬಿಸಿಲಿಗೆ ಹೋಗುವ ಸಂದರ್ಭದಲ್ಲಿ ಸನ್ ಗ್ಲಾಸ್ ಅಥವಾ ಸ್ಪೋರ್ಟ್ಸ್ ಗಾಗಲ್ ಗಳನ್ನು ಧರಿಸಬೇಕು. ನೇರವಾಗಿ ಸೂರ್ಯನ ಬೆಳಕನ್ನು ನೋಡಬಾರದು.