ನಿಮ್ಮ ಮುಖದಲ್ಲಿ ಅರಳುವ ನಗು ನಿಷ್ಕಲ್ಮಶವಾಗಿ ನೋವು ರಹಿತವಾಗಿ ಇರಬೇಕಾದರೆ ನಿಮ್ಮ ಬಾಯಿಯ ಅಥವಾ ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ನೀವು ಸಸ್ಯಾಹಾರಿಯಾಗಿರಿ ಇಲ್ಲವೇ ಮಾಂಸಾಹಾರಿಯಾಗಿರಿ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಜಾಹೀರಾತುಗಳಲ್ಲಿ ತೋರಿಸಿದಂತೆ ಕೇವಲ ಪೇಸ್ಟ್ ಗಳನ್ನು ಬದಲಾಯಿಸುವುದರ ಮೂಲಕ ದಂತ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯವಿಲ್ಲ.
ಕನಿಷ್ಠ 6 ತಿಂಗಳಿಗೊಮ್ಮೆ ದಂತ ವೈದ್ಯರನ್ನು ಸಂಪರ್ಕಿಸಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮೊದಲಿಗೆ ಸಣ್ಣದಾಗಿ ಕಾಣಿಸಿಕೊಳ್ಳುವ ಹಲ್ಲಿನ ಹುಳುಕು ದಿನ ಕಳೆದಂತೆ ದೊಡ್ಡದಾಗಿ ಹಲ್ಲು ಕೀಳಬೇಕಾದ ಸಂದರ್ಭ ಬಂದೀತು. ಹಾಗಾಗಿ ಆರಂಭದಲ್ಲೇ ಹಲ್ಲಿನ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.
ಬಾಯಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಹುಣ್ಣು ಕೂಡಾ ಇನ್ನಾವುದೋ ರೋಗದ ಸಂಕೇತವಿರಬಹುದು. ಇವುಗಳನ್ನು ನಿರ್ಲಕ್ಷಿಸದೆ ಸಾಧ್ಯವಾದಷ್ಟು ವೈದ್ಯರನ್ನು ಸಂಪರ್ಕಿಸಿ, ಪರಿಹಾರ ಪಡೆಯಲು ಪ್ರಯತ್ನಿಸಿ.