alex Certify ಚಳಿಗಾಲದಲ್ಲಿ ಹೆಚ್ಚುತ್ತಿರುವ ತೂಕವನ್ನು ವ್ಯಾಯಾಮವಿಲ್ಲದೇ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಹೆಚ್ಚುತ್ತಿರುವ ತೂಕವನ್ನು ವ್ಯಾಯಾಮವಿಲ್ಲದೇ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್…..!

ಚಳಿಗಾಲದಲ್ಲಿ ನಮ್ಮ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಮೈಕೊರೆವ ಚಳಿಯಲ್ಲಿ ಚಟುವಟಿಕೆಯಿಂದಿರುವುದು ಕಷ್ಟ. ನಾವು ಬಹುತೇಕ ಸಮಯವನ್ನು ಹಾಸಿಗೆಯಲ್ಲಿ ಕಳೆಯುತ್ತೇವೆ. ಕಚೇರಿಯ ಕೆಲಸವನ್ನಂತೂ ಕುಳಿತೇ ಮಾಡುತ್ತೇವೆ. ಶೀತ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ನಾವು ಹೊರಗೆ ಹೋಗುವುದು, ವಾಕಿಂಗ್‌ ಇವನ್ನೆಲ್ಲ ಕಡಿಮೆ ಮಾಡುತ್ತೇವೆ. ಇದು ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ.

ಮನೆಯ ಕೆಲಸ ಮತ್ತು ಕಚೇರಿಗೆ  ಹೋಗುವುದರಿಂದ ವ್ಯಾಯಾಮ ಮಾಡಲು ಸಮಯ ಸಿಗುತ್ತಿಲ್ಲ ಎಂಬುದು ಅನೇಕರ ಅಳಲು. ಆದರೆ ವ್ಯಾಯಾಮವನ್ನೇ ಮಾಡದೆ ಚಳಿಗಾಲದಲ್ಲಿ ತೂಕವನ್ನು ನಿಯಂತ್ರಿಸಬಹುದು.

ಆಹಾರದಲ್ಲಿ ಪ್ರೋಟೀನ್ ಸಮತೋಲನ

ಆಹಾರದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಅನ್ನು ಸೇವಿಸುವುದರಿಂದ ಪದೇ ಪದೇ ಹಸಿವಾಗುವುದಿಲ್ಲ. ಇದರಿಂದಾಗಿ ನಾವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೇವೆ ಮತ್ತು ತೂಕ ಕೂಡ ನಿಯಂತ್ರಣದಲ್ಲಿರುತ್ತದೆ. ಹೊಟ್ಟೆ ತುಂಬಿದಾಗ ಹೆಚ್ಚುವರಿ ಆಹಾರವನ್ನು ಸೇವಿಸುವುದಿಲ್ಲ, ಇದರಿಂದಾಗಿ ಕೊಬ್ಬು ಹೆಚ್ಚಾಗುವುದಿಲ್ಲ.

ಆರೋಗ್ಯಕರ ಆಹಾರ ಸೇವನೆ

ತೂಕ ಇಳಿಸಿಕೊಳ್ಳಲು ಆರೋಗ್ಯಕರವಾದ ಆಹಾರವನ್ನೇ ಸೇವಿಸಬೇಕು. ತೂಕವನ್ನು ಕಳೆದುಕೊಳ್ಳಲು ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಅನಿವಾರ್ಯವಲ್ಲ. ಆದರೆ ಆರೋಗ್ಯಕರ ಆಹಾರವನ್ನು ತಿನ್ನುವುದು ಬಹಳ ಮುಖ್ಯ.

ಹೆಚ್ಚು ಹಣ್ಣುಗಳ ಸೇವನೆ

ನಿಮ್ಮ ದಿನವನ್ನು ಪೋಷಕಾಂಶಗಳೊಂದಿಗೆ ಪ್ರಾರಂಭಿಸಿ, ಅಂದರೆ ಪ್ರತಿದಿನ ಹಣ್ಣುಗಳನ್ನು ತಿನ್ನಿರಿ. ಇವು ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತವೆ. ಬೆಳಗ್ಗೆ ಲಘು ಉಪಹಾರ ಮಾಡಬೇಕೆಂದರೆ ವಿವಿಧ ಬಗೆಯ ಹಣ್ಣುಗಳ ಚಾಟ್ ಮಾಡಿಕೊಂಡು ಸೇವಿಸಬಹುದು.

ಅಗಿದು ನಿಧಾನವಾಗಿ ತಿನ್ನಿರಿ

ಆತುರದಿಂದ ಊಟ-ಉಪಹಾರ ಮಾಡಬಾರದು. ಆಹಾರವನ್ನು ಚೆನ್ನಾಗಿ ಅಗಿಯಿರಿ ಮತ್ತು ನಿಧಾನವಾಗಿ ತಿನ್ನಿರಿ. ಇದರಿಂದ  ಹೊಟ್ಟೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಬೇಗ ಬೇಗ ತಿನ್ನುವ ಸಂದರ್ಭದಲ್ಲಿ ನಾವು ಅತಿಯಾಗಿ ಊಟ ಮಾಡಿಬಿಡುತ್ತೇವೆ. ಇದರಿಂದ ಸಹಜವಾಗಿಯೇ ತೂಕ ಹೆಚ್ಚಾಗುತ್ತದೆ. ಈ ವಿಧಾನಗಳನ್ನು ಅಳವಡಿಸಿಕೊಂಡರೆ ಯಾವುದೇ ವ್ಯಾಯಾಮವಿಲ್ಲದೆ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...