ಬೇಸಿಗೆಯ ಬೇಗೆ ಮುಗಿದು ಮಳೆಗಾಲದ ಉಲ್ಲಾಸವನ್ನು ಆನಂದಿಸುವ ಸಮಯ ಬಂದಿದೆ. ಈ ಕಾಲದಲ್ಲಿ ಸಾಮಾನ್ಯ ಜ್ವರ ಹೊಟ್ಟೆಯ ಸೋಂಕು, ಅಲರ್ಜಿಯಂಥ ಸಮಸ್ಯೆಗಳು ಸಾಮಾನ್ಯ. ಹೆಚ್ಚಿನ ತೇವಾಂಶಗಳು ಗಾಳಿಯಲ್ಲಿ ಬಂದು ನಮ್ಮ ದೇಹವನ್ನು ಸೋಂಕುಗಳಿಗೆ ತುತ್ತಾಗುವಂತೆ ಮಾಡುತ್ತದೆ. ನಮ್ಮ ಆಹಾರಕ್ಕೆ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಹಲವು ಸಂಗತಿಗಳು ನಿರ್ಧಾರವಾಗುತ್ತವೆ. ಹೀಗಾಗಿ, ಈ ಆಹಾರದ ಸುಳಿವುಗಳನ್ನು ಅನುಸರಿಸುವುದು ಅತ್ಯಗತ್ಯ.
ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚು ಸಾಮಾನ್ಯವಾಗುತ್ತಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಸಸ್ಯಾಹಾರಿ ಆಹಾರಗಳನ್ನು ತಿನ್ನುವ ಮೂಲಕ ಕರುಳಿನ ಬ್ಯಾಕ್ಟೀರಿಯಾಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಗಿಡಮೂಲಿಕೆಗಳಿಂದ ಮನೆಯಲ್ಲಿ ತಯಾರಿಸಿದ ಚಹಾಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪ್ ತಯಾರಿಸಿ ಕುಡಿಯಿರಿ.
ಮಾನ್ಸೂನ್‌ನಲ್ಲಿ ಸೋಂಕು ತಪ್ಪಿಸಲು ಸುಲಭವಾದ ಮಾರ್ಗವೆಂದರೆ ನಿಮ್ಮ ದೇಹಕ್ಕೆ ಏನಾಗುತ್ತಿದೆ ಎಂಬುದನ್ನು ಪರೀಕ್ಷಿಸುವುದು. ನೀವು ಕುಡಿಯುವ ನೀರನ್ನು ಸರಿಯಾಗಿ ಕುದಿಸಿ ಮತ್ತು ಸೂಕ್ಷ್ಮಾಣು ರಹಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಿ. ಇದಲ್ಲದೆ, ಈ ಅವಧಿಯಲ್ಲಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ, ರೆಡಿಮೇಡ್ ಫುಡ್ ನಿಂದ ದೂರವಿರಿ.
ಮುಂಗಾರು ಗಾಳಿಯಲ್ಲಿ ಹೆಚ್ಚಿನ ತೇವಾಂಶವಿರುತ್ತದೆ. ಆದರೆ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಕುಡಿಯುವ ನೀರನ್ನು ಕುದಿಸಿ ಕುಡಿಯುವುದು ಒಳ್ಳೆಯದು. ಋತುಮಾನದ ಹಣ್ಣುಗಳಾದ ಸೇಬು, ದಾಳಿಂಬೆ, ಚೆರ್ರಿ ಮತ್ತು ಅನಾನಸ್ ಸೇವಿಸಿ. ದ್ರವ ರೂಪದ ಸೂಪ್ ಗಳನ್ನು ಹೆಚ್ಚು ಕುಡಿಯಿರಿ.
ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ಶಕ್ತಿಯನ್ನು ಕಾಪಾಡಿಕೊಳ್ಳಲು ಹಾಗೂ ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಕಾರಿ. ಮನೆಯಲ್ಲಿದ್ದಾಗ ಆರೋಗ್ಯಕರ ಆಹಾರವನ್ನು ಸೇವಿಸಿ. ಮೈದಾ ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಗಳಿಂದ ದೂರವಿರಿ