ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ ಹಾಗೇ ಇನ್ನು ಕೆಲವರಿಗೆ ಕಡಿಮೆ ಇರುತ್ತದೆ. ಅಂತಹವರು ಈ ಆಹಾರ ಸೇವಿಸುವುದರ ಮೂಲಕ ಎದೆ ಹಾಲನ್ನು ಹೆಚ್ಚಿಸಿಕೊಳ್ಳಬಹುದು.
2 ಚಮಚದಷ್ಟು ಸೋಂಪನ್ನು 2 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ ಕುಡಿಯಿರಿ. ಇದನ್ನು ದಿನಕ್ಕೆ ಮೂರು ಹೊತ್ತು ಊಟವಾದ ನಂತರ ಕುಡಿಯಿರಿ.
2 ಚಮಚದಷ್ಟು ಮೆಂತೆ ಕಾಳುಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಎದ್ದಾಗ ಈ ನೀರನ್ನು ಸೇವಿಸಿ ಜತೆಗೆ ಆ ಮೆಂತೆಕಾಳನ್ನು ಜಗಿದು ತಿನ್ನಿರಿ. ಇದರಿಂದ ಹಾಲು ಹೆಚ್ಚಾಗುತ್ತದೆ.
1 ಚಮಚದಷ್ಟು ಜೀರಿಗೆ ಪುಡಿಯೊಂದಿಗೆ 1 ಚಮಚದಷ್ಟು ತುಪ್ಪ ಸೇರಿಸಿಕೊಂಡು ತಿನ್ನುವುದರಿಂದ ಎದೆಹಾಲು ಹೆಚ್ಚಾಗುತ್ತದೆ.
1 ಟೀ ಸ್ಪೂನ್ ಒಣ ಶುಂಠಿ ಪುಡಿಗೆ 1 ಟೇಬಲ್ ಸ್ಪೂನ್ ನಷ್ಟು ಬೆಲ್ಲ ಸೇರಿಸಿಕೊಂಡು ದಿನಕ್ಕೆ ಎರಡು ಸಲ ತಿನ್ನಿರಿ. ಇದರಿಂದ ಎದೆಹಾಲು ಹೆಚ್ಚಾಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ಎದೆಹಾಲು ವೃದ್ದಿಯಾಗುತ್ತದೆ.